ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ಕ್ರಿಮಿನಾಶಕ ಬೆರಕೆ: ಐಜಿಪಿ ಶರತ್ ಚಂದ್ರ

ಚಾಮರಾಜನಗರ/ಮೈಸೂರು: ಸುಳ್ವಾಡಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದದಲ್ಲಿ ಕ್ರಿಮಿನಾಶಕ ಬೆರೆಸಲಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಅವರು ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವರ ಪ್ರಸಾದದಲ್ಲಿ ಕ್ರಿಮಿನಾಶಕ ಬೆರೆತಿರುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಸಾಬೀತಾಗಿದೆ. 10 ರಿಂದ 12 ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ಸಾಕಷ್ಟು ಸುಳಿವು ಸಿಕ್ಕಿದೆ. ಆದರೆ, ಎಲ್ಲ ಅಂಶಗಳನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಆರ್ಗನೋಫಾಸ್ಪರಸ್ ಕ್ರಿಮಿನಾಶಕ
ಇದೇ ವೇಳೆ ಮಾತನಾಡಿದ ಮೈಸೂರು ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಆರ್ಗನೋಫಾಸ್ಪರಸ್ ಅಂಶವುಳ್ಳ ವಿಷವನ್ನು ಬೆರೆಸಲಾಗಿದೆ ಎಂದು ಮಾಹಿತಿ ನೀಡಿದರು. (ದಿಗ್ವಿಜಯ ನ್ಯೂಸ್​)

ಸುಳ್ವಾಡಿ ವಿಷ ಪ್ರಸಾದ ದುರಂತ: ಮೃತರ ಸಂಖ್ಯೆ 14ಕ್ಕೆ ಏರಿಕೆ, ಮೊನ್ನೆ ತಂದೆ, ಇಂದು ತಾಯಿ ಕಳೆದುಕೊಂಡು ಪುತ್ರಿ ಅನಾಥೆ

ಸುಳ್ವಾಡಿ ವಿಷ ಪ್ರಸಾದ ದುರಂತ: ಆರೋಪಿಗಳ ಪರ ವಾದ ಮಾಡದಿರಲು ವಕೀಲರ ತೀರ್ಮಾನ

ಪ್ರಸಾದಕ್ಕೇ ವಿಷ

ವರ್ಷಾಂತ್ಯದ 20 ದಿನಗಳಲ್ಲಿ 51 ಮರಣ