More

    VIDEO| ರಸ್ತೆ ಮಧ್ಯೆ‌ಯೇ ಚಿರತೆಗಳ ಲವ್ವಿಡವ್ವಿ: ಕಾರು ಚಾಲಕ ಸೆರೆಹಿಡಿದ ವಿಡಿಯೋ ವೈರಲ್​!

    ಚಾಮರಾಜನಗರ: ಚಾಮರಾಜನಗರ ತಾಲೂಕಿನ‌‌ ಅಮಚವಾಡಿ ಗ್ರಾಮದಲ್ಲಿ ಚಿರತೆಗಳೆರಡು ರಸ್ತೆ ಮಧ್ಯೆಯೇ ಕೆಲ ಕಾಲ ಮಿಲನ ನಡೆಸಿರುವ ವಿಡಿಯೋ ಕಾರು ಚಾಲಕನ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ‌ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಅಮಚವಾಡಿ ಗ್ರಾಮದ ಎಣ್ಣೆಹೊಳೆ ದೇವಸ್ಥಾನದ ಬಳಿ ಬುಧವಾರ ರಾತ್ರಿ 9 ಗಂಟೆ ಸಮಯದಲ್ಲಿ ಎರಡು ಚಿರತೆಗಳು ರಸ್ತೆಯಲ್ಲಿ ಕಾಣಿಸಿಕೊಂಡಿವೆ. ಇದೇ ವೇಳೆ ಕಾರು ಚಾಲಕ ಚಿರತೆಗಳು ಮಿಲನ ನಡೆಸುತ್ತಿರುವುದನ್ನು ನೋಡಿ ಮುಂದೆ ಸಾಗಾಲು ಪರದಾಟ‌‌ ನಡೆಸಿದ್ದಾನೆ. ಬಳಿಕ ತನ್ನ ಮೊಬೈಲ್​ನಲ್ಲಿ ಚಿರತೆಗಳ ದೃಶ್ಯವನ್ನು‌‌‌ ಸೆರೆ‌ ಹಿಡಿದಿದ್ದಾನೆ.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು, ಚಿರತೆಳೆರಡರ ಅಪರೂಪದ ದೃಶ್ಯಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts