ಶೌರ್ಯ ದಿವಸ್ ಆಚರಣೆ

ಚಾಮರಾಜನಗರ: ಕಳೆದ 26 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕಟ್ಟಡವನ್ನು ಕೆಡವಿದ ನೆನಪಿಗಾಗಿ ನಗರದಲ್ಲಿ ಗುರುವಾರ ಆಜಾದ್ ಹಿಂದು ಸೇನೆ ಹಾಗೂ ಹಿಂದುಪರ ಸಂಘಟನೆಗಳ ವತಿಯಿಂದ ಶೌರ್ಯ ದಿವಸ್ ಆಚರಿಸಲಾಯಿತು.

ನಗರದ ಹಳೇ ಬಸ್ ನಿಲ್ದಾಣದ ಬಳಿ ಇರುವ ಮಾರಮ್ಮ ದೇವಸ್ಥಾನದ ಬಳಿ ಜಮಾಯಿಸಿದ ಆಜಾದ್ ಹಿಂದು ಸೇನೆ ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಮಾರಮ್ಮನಿಗೆ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಮುಂಭಾಗ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಆಜಾದ್ ಹಿಂದು ಸೇನೆ ಅಧ್ಯಕ್ಷ ಎಂ.ಎಸ್.ಪೃಥ್ವಿರಾಜ್ ಮಾತನಾಡಿ, 26 ವರ್ಷದ ಹಿಂದೆ ಅಯೋಧ್ಯೆಯಲ್ಲಿದ್ದ ಶ್ರೀರಾಮಮಂದಿರವನ್ನು ಕೆಡವಿ ಆ ಜಾಗದಲ್ಲಿ ಬಾಬರ್ ಕಟ್ಟಡವನ್ನು ನಿರ್ಮಿಸಲಾಗಿತ್ತು. ಆದರೆ 1992 ಡಿಸೆಂಬರ್ 6 ರಂದು ಕಳಂಕಿತ ಕಟ್ಟಡವನ್ನು ಧ್ವಂಸ ಮಾಡಲಾಯಿತು. ಇದರ ನೆನಪಿಗಾಗಿ ದೇಶಾದ್ಯಂತ ಡಿ.6 ರಂದು ಶೌರ್ಯ ದಿವಸ್ ಆಚರಿಸಲಾಗುತ್ತದೆ. ಆದಷ್ಟು ಬೇಗ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮಮಂದಿರ ನಿರ್ಮಾಣ ಮಾಡಬೇಕಿದೆ ಎಂದು ತಿಳಿಸಿದರು.

ನಗರಸಭಾ ಸದಸ್ಯರಾದ ಶಿವರಾಜ್, ರಾಘವೇಂದ್ರ, ಸುದರ್ಶನಗೌಡ, ಗಾಯತ್ರಿ, ರಾಜ್ಯ ಎಸ್ಟಿ ಮೋರ್ಚಾದ ಕಾರ್ಯದರ್ಶಿ ಕೆಲ್ಲಂಬಳ್ಳಿ ಸೋಮನಾಯಕ, ಆಜಾದ್ ಹಿಂದು ಸೇನೆಯ ಚಂದ್ರು, ಶಿವು ವಿರಾಟ್, ಬಸವರಾಜು, ಪ್ರಸಾದ್, ಪ್ರದೀಪ್, ಸಿದ್ದರಾಜು ಇತರರಿದ್ದರು.

Leave a Reply

Your email address will not be published. Required fields are marked *