More

  ಮದ್ಯದಂಗಡಿಯಲ್ಲಿ ಹಣ ಕಳವು

  ಹನೂರು: ತಾಲೂಕಿನ ಕೌದಳ್ಳಿ ಗ್ರಾಮದ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಯಲ್ಲಿ ಭಾನುವಾರ ರಾತ್ರಿ ಸುಮಾರು 2 ಲಕ್ಷ ಹಣ ಕಳವಾಗಿದೆ.

  ಗ್ರಾಮದ ಹೊರವಲಯದಲ್ಲಿನ ಮದ್ಯದ ಮಳಿಗೆಯಲ್ಲಿ ತಡರಾತ್ರಿ ಷೆಟರ್ ಲಾಕ್ ಮುರಿದು ಒಳನುಗ್ಗಿರುವ ಕಳ್ಳರು, ಕ್ಯಾಷ್ ಡ್ರಾಯರ್‌ನಲ್ಲಿದ್ದ ಸುಮಾರು 2 ಲಕ್ಷ ರೂ. ಕದ್ದು ಪರಾರಿಯಾಗಿದ್ದಾರೆ. ಬೆಳಗ್ಗೆ 6ರ ವೇಳೆಯಲ್ಲಿ ಶೆಟರ್ ಲಾಕ್ ಮುರಿದಿರುವುದನ್ನು ತಿಳಿದ ಸ್ಥಳೀಯರು, ಮಳಿಗೆಯ ಮೇಲ್ವಿಚಾರಕ ರಾಚಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ.

  ರಾಚಪ್ಪ ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಇನ್ಸ್‌ಪೆಕ್ಟರ್ ಮನೋಜ್‌ಕುಮಾರ್, ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿ ಸಿದ್ದೇಶ್, ಗಿರೀಶ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ಜಿಲ್ಲಾ ಬೆರಳಚ್ಚು ಹಾಗೂ ಶ್ವಾನ ದಳದ ತಂಡ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  See also  ಗೋಪಾಲಪುರ ಗ್ರಾಪಂ ಜೆಡಿಎಸ್ ತೆಕ್ಕೆಗೆ: ಸವಿತಾ ಅಧ್ಯಕ್ಷೆ, ಕೆಂಪಚಾರಿ ಉಪಾಧ್ಯಕ್ಷರಾಗಿ ಆಯ್ಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts