ಅಭಿಮಾನಿ ಕೈಯಲ್ಲಿ ಕುರುಕ್ಷೇತ್ರ ಟ್ರೈಲರ್​​ ಬಿಡುಗಡೆ ಮಾಡಿಸಿದ ಚಾಲೆಂಜಿಂಗ್​​ ಸ್ಟಾರ್​​ ದರ್ಶನ್​

ಬೆಂಗಳೂರು: ದಕ್ಷಿಣ ಭಾರತದಲ್ಲಿ ಬಹಳ ಕೂತೂಹಲ ಕೆರಳಿಸಿರುವ ಬಹುತಾರಾ ನಟನೆಯ ಕುರುಕ್ಷೇತ್ರ ಚಿತ್ರದ ಟ್ರೈಲರ್​ನ್ನು ಭಾನುವಾರ ಬಿಡುಗಡೆಯಾಯಿತು.

ಕೋರಮಂಗಲದ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಅವರು ದೂರದಲ್ಲಿ ನಿಂತಿದ್ದ ಅಭಿಮಾನಿಯೊಬ್ಬರ ಕೈಯಲ್ಲಿ ಟ್ರೈಲರ್​ ಬಿಡುಗಡೆ ಮಾಡಿಸಿದರು.

ಈ ವೇಳೆ ಮಾತನಾಡಿದ ಅವರು ಏಳು ಜನ್ಮ ಹುಟ್ಟಿದರೂ ಅಭಿಮಾನಿಗಳ ಋಣ ತೀರಿಸಲು ಸಾಧ್ಯವಿಲ್ಲ. ಅಭಿಮಾನಿಗಳಿಂದಲೇ ನಾವು, ಅವರಿಲ್ಲದೇ ನಾವಿಲ್ಲ ಎಂದಿದ್ದಾರೆ. ​ ಅವರ ಮಾತುಗಳಿಗೆ ಅಲ್ಲಿ ನೆರೆದಿದ್ದ ಅಭಿಮಾನಿಗಳು ಶಿಳ್ಳೆ ಹೊಡೆಯುವ ಮೂಲಕ ಕೇಕೆ ಹಾಕಿದ್ದಾರೆ.

ನಂತರ ಸಿನಿಮಾ ಬಗ್ಗೆ ಮಾತನಾಡಿದ ಅವರು ಸಿನಿಮಾ ನಿರ್ಮಾಣ ಮಾಡಲು ತಂಡ ರಕ್ತ ಸುರಿಸಿದೆ. ಈ ಸಿನಿಮಾ ಶೂಟಿಂಗ್​​ ವೇಳೆ ನನಗೆ ಬಹಳ ಕಷ್ಟವಾಯಿತು. ಇಂತಹ ಸಿನಿಮಾ ಮುಂದೆ ನಾನು ಮಾಡುತ್ತೇನೆ ಇಲ್ಲವೋ ಗೊತ್ತಿಲ್ಲ. ಸಿನಿಮಾದಲ್ಲಿ ಎಲ್ಲರೂ ಚೆನ್ನಾಗಿ ನಟನೆ ಮಾಡಿದ್ದಾರೆ. ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಅಪ್ಪ ನಟನೆ ಮಾಡಿದ್ದರು. ಅವರಿಂದಲೇ ನಾನು ಪೌರಾಣಿಕ ಸಿನಿಮಾ ಮಾಡಲು ಕಲಿತಿದ್ದೇನೆ. ಆನೆ ಸಾಕಲು ಪರವಾನಗಿ ಸಿಕ್ಕರೆ, ಸಿನಿಮಾದಲ್ಲಿರುವ ಆನೆಯನ್ನು ನಾನು ಸಾಕುತ್ತೇನೆ ಎಂದು ದರ್ಶನ್​​​ ಹೇಳಿದರು. (ಏಜೆನ್ಸೀಸ್​)