More

    ಭಾಷೆ, ಸಂಸ್ಕೃತಿಯ ನೈಜತೆ ದಾಖಲಿಸಿ

    ಚಳ್ಳಕೆರೆ: ಪ್ರಾದೇಶಿಕ ಬದುಕಿನ ಭಾಷೆ ಮತ್ತು ಸಂಸ್ಕೃತಿಯ ನೈಜತೆ ದಾಖಲು ಮಾಡುವ ಜವಾಬ್ದಾರಿ ಸ್ಥಳೀಯ ಬರಹಗಾರರ ಮೇಲಿದೆ ಎಂದು ಸಾಹಿತಿ ತಿಪ್ಪಣ್ಣ ಮರಿಕುಂಟೆ ಹೇಳಿದರು.

    ನಗರದ ವಿಜಯವಾಣಿ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹೊಸವರ್ಷ ಸಂಂಭ್ರಮದಲ್ಲಿ ಮಾತನಾಡಿ, ಆಂಧ್ರ ಗಡಿಭಾಗದ ತಾಲೂಕುಗಳಲ್ಲಿ ತೆಲುಗು ಮಿಶ್ರಿತ ಕನ್ನಡ ಉಗಮವಾಗಿ ಸ್ವಚ್ಛ ಕನ್ನಡ ಭಾಷೆ ಮರೆಯಾಗುತ್ತಿದೆ. ಬಹುತೇಕ ಬುಡಕಟ್ಟು ಸಂಸ್ಕೃತಿ ಮತ್ತು ಶ್ರಮಿಕ ವರ್ಗದ ಜನ ಜೀವನದಲ್ಲಿ ದ್ವಿಭಾಷೆಯ ಸಮ್ಮಿಲನ ಹಾಸುಹೊಕ್ಕಾಗಿದೆ. ಇಂತಹ ಭಾಷಾ ನಡವಳಿಕೆಗಳ ಸಾಮಾಜಿಕ ಸಂಬಂಧಗಳನ್ನು ಸಾಹಿತ್ಯಿಕವಾಗಿ ದಾಖಲಿಸುವ ಅಗತ್ಯವಿದೆ ಎಂದರು.

    ಸಾಹಿತ್ಯ ಕ್ಷೇತ್ರದಲ್ಲಿ ತಾಲೂಕಿನ ಸ್ಥಾನವನ್ನು ಮೇಲಸ್ಥರದಲ್ಲಿರಿಸಿದ ಕೀರ್ತಿ ಬೆಳಗೆರೆ ಕೃಷ್ಣಶಾಸ್ತ್ರಿ ಮತ್ತು ತಳುಕಿನ ವೆಂಕಣ್ಣಯ್ಯ ಅವರಿಗೆ ಸಲ್ಲುತ್ತದೆ. ನಮ್ಮಲ್ಲಿ ಬರಹಗಾರರು ಸಾಕಷ್ಟಿದ್ದಾರೆ. ಅವಕಾಶ ಕೊರತೆಯಿಂದ ಇರುವಿಕೆ ಕಾಣಿಸುತ್ತಿಲ್ಲ. ಇವರಿಂದ ಆಯ್ದ ಎರಡು ಕವಿತೆಗಳಂತೆ ಸಂಕಲನವನ್ನು ಸಂಗ್ರಹಿಸುವ ಮೂಲಕ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಮುದ್ರಣದಲ್ಲಿ ಪುಸ್ತಕ ಹೊರತರುವ ಕೆಲಸ ಆಗಬೇಕಿದೆ ಎಂದರು.

    ಪುರಸಭೆ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ಸಾಹಿತ್ಯ ಪರಿಷತ್ ಹಮ್ಮಿಕೊಳ್ಳುವ ಸಾಹಿತ್ಯಿಕ ಮತ್ತು ಕವಿತೆಗಳ ಸಂಗ್ರಹ ಸಂಕಲನ ಪುಸ್ತಕ ಕಾರ್ಯಕ್ರಮ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.

    ಪುರಸಭೆ ಮಾಜಿ ಸದಸ್ಯ ಎಸ್.ಮುಜೀಬುಲ್ಲಾ, ಕವಿ ಕೊರ‌್ಲಕುಂಟೆ ತಿಪ್ಪೇಸ್ವಾಮಿ, ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಯೋಗೇಶ್ ಯಲಗಟ್ಟೆ, ಗ್ರಾಪಂ ಸದಸ್ಯ ವಿ.ಬೆಟ್ಟಪ್ಪ, ಎಂ.ಸಿ.ತಿಪ್ಪೇಸ್ವಾಮಿ, ಅನುಪಮಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts