ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ

ಚಳ್ಳಕೆರೆ: ಕಾಡು ಕಡಿಮೆ ಆಗುತ್ತಿರುವ ದಿನದಲ್ಲಿ ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ ಆಗಬೇಕೆಂದು ಪಿಡಿಒ ಹನುಮಂತಪ್ಪ ಹೇಳಿದರು.

ತಾಲೂಕಿನ ಕಾಪರಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಗಿಡಮರಗಳು ಹೆಚ್ಚಾದರೆ ಪರಿಸರ ಸಮತೋಲನವಾಗಿ ಕಾಲಕ್ಕೆ ಸರಿಯಾಗಿ ಮಳೆ ಬರುತ್ತದೆ. ಆಗ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದರು.

ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಸದಸ್ಯ ದುರುಗಪ್ಪ, ಮುಖ್ಯಶಿಕ್ಷಕ ಎಂ.ಹನುಮಂತರಾಯಪ್ಪ, ಸಹ ಶಿಕ್ಷಕರಾದ ವಿ.ರಂಗಸ್ವಾಮಿ, ಗೆಜ್ಜಪ್ಪ, ಕೃಷ್ಣ ನಾಯಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *