ಮೇವು ಅವ್ಯವಹಾರ ಬಯಲು

ಚಳ್ಳಕೆರೆ: ಗೋಶಾಲೆಗೆ ಮೇವು ಪೂರೈಕೆ ಮಾಡುವಲ್ಲಿ ಅವ್ಯವಹಾರ ನಡೆಸುತ್ತಿದ್ದವನ್ನು ಟ್ರಾೃಕ್ಟರ್ ಸಮೇತ ಭಾನುವಾರ ತಹಸೀಲ್ದಾರ್ ವಶಕ್ಕೆ ಪಡೆದಿದ್ದಾರೆ.

ಅಧಿಕ ತೂಕ ಬರಲೆಂದು ಟ್ರಾೃಕ್ಟರ್‌ನಲ್ಲಿ ಕಲ್ಲು ತುಂಬಿಸಿ ಗೋಶಾಲೆಗೆ ಮೇವು ಸಾಗಿಸುತ್ತಿದ್ದವರನ್ನು ಟ್ರಾೃಕ್ಟರ್ ಸಮೇತ ಹಿಡಿದ ಅಜ್ಜನಗುಡಿ ಗ್ರಾಮಸ್ಥರು, ತಹಸೀಲ್ದಾರ್ ಅವರ ವಶಕ್ಕೆ ಒಪ್ಪಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್, ಮೇವು ಮಧ್ಯೆ ಇಟ್ಟಿದ್ದ ಕಲ್ಲುಗಳನ್ನು ತೆಗೆಸಿದರು. ಸರ್ಕಾರಕ್ಕೆ ಮೋಸ ಮಾಡುವ ಜತೆಗೆ ಮೂಕ ಪ್ರಾಣಿಗಳ ಮೇವು ಸರಬರಾಜಿನಲ್ಲೂ ಅನ್ಯಾಯ ಮಾಡುತ್ತಿದ್ದೀರಿ. ನಿಮಗೆ ದೇವರು ಒಳ್ಳೆಯದು ಮಾಡೋದಿಲ್ಲ ಎಂದು ಸರಬರಾಜುದಾರರನ್ನು ತರಾಟೆಗೆ ತೆಗೆದುಕೊಂಡರು.

ಹಿನ್ನೆಲೆ: ಗೋಶಾಲೆಗೆ ಸರಬರಾಜಾಗುತ್ತಿದ್ದ ಮೇವು ಸಮರ್ಪಕವಾಗಿ ವಿತರಣೆಯಾಗುತ್ತಿರಲಿಲ್ಲ. ಆದರೂ, ಮೇವಿನ ಲೆಕ್ಕ ದೊಡ್ಡದಾಗಿ ಬೆಳೆಯುತ್ತಿತ್ತು. ಅನುಮಾನಗೊಂಡ ರೈತರಾದ ಓಬಯ್ಯ, ಪಾಲಯ್ಯ, ಗಾದ್ರಿ ಪಾಲಯ್ಯ, ಬಸವರಾಜು ಇತರರು ಟ್ರಾೃಕ್ಟರನ್ನು ಹಿಂಬಾಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಸ್ಥಳೀಯರಾದ ಮಂಜು, ತಿರುಮಲ, ಸಿದ್ದೇಶ್, ಓಬಯ್ಯ, ವಾಲ್ಮೀಕಿ ನಗರ ಚನ್ನಿಗರಾಯಪ್ಪ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *