ಚಳ್ಳಕೆರೆ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಕ್ಕೆ ಆಗ್ರಹಿಸಿ ಗುರುವಾರ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್ ಚಂದ್ರಶೇಖರ್ಗೆ ಮನವಿ ಸಲ್ಲಿಸಿದರು.
ಸುರಂಗ ಮಾರ್ಗ ನಿರ್ಮಾಣದ ನೆಪ ಹೇಳಿಕೊಂಡು ಕಾಲಹರಣ ಮಾಡಲಾಗುತ್ತಿದೆ. ಜನಪ್ರತಿನಿಧಿಗಳು ಒಂದೆರಡು ನಾಲೆ ಕಾಮಗಾರಿ ವೀಕ್ಷಿಸುವುದರಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ದೂರಿದರು.
ಯಾರಿಗೂ ಭದ್ರಾ ಯೋಜನೆ ಪೂರ್ಣಗೊಳಿಸುವ ಇಚ್ಛಾಶಕ್ತಿ ಇಲ್ಲವಾಗಿದೆ. ಇನ್ನು ಮುಂದೆ ಜನರಿಗೆ ಆಶ್ವಾಸನೆ ಹೇಳುವುದನ್ನು ಬಿಟ್ಟು ಜಿಲ್ಲೆಯ ಜನಪ್ರತಿನಿಧಿಗಳು ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಹಂತದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್, ವಕೀಲರಾದ ಡಿ.ಬಿ.ಬೋರಯ್ಯ, ಕೆ.ಹನುಮಂತಪ್ಪ, ಜಡೇಕುಂಟೆ ಕುಮಾರ್, ಬಿ.ಟಿ.ಗುರುಮೂರ್ತಿ, ಡಿ.ಜಯಶೀಲರೆಡ್ಡಿ, ಡಿ.ಆರ್.ರವೀಂದ್ರ, ಕೆ.ಜಯಪ್ಪ, ಎನ್.ತಿಪ್ಪೇಸ್ವಾಮಿ, ಟಿ.ಶ್ರೀನಿವಾಸ ಮತ್ತಿತರರಿದ್ದರು.