ವರುಣನಿಗಾಗಿ ಕುಂಭಾಬಿಷೇಕ

ಚಳ್ಳಕೆರೆ: ನಗರದ ಹೊರವಲಯದ ಕರೇಕಲ್ ಕೆರೆ ಸೂಜಿ ಮಲ್ಲೇಶ್ವರ ದೇವಸ್ಥಾನದಲ್ಲಿ ಭಾನುವಾರ ಮಳೆಗಾಗಿ ಪ್ರಾರ್ಥಿಸಿ 101 ಕುಂಭಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನ ಸಮಿತಿ ಅಧ್ಯಕ್ಷ ಜೆ.ಟಿ.ವಸಂತಕುಮಾರ್ ಮಾತನಾಡಿ, ಸಕಾಲಕ್ಕೆ ಮಳೆಯಾಗದಿದ್ದರೆ, ಸಕಲ ಜೀವರಾಶಿಗೂ ತೊಂದರೆಯಾಗುತ್ತದೆ. ಸತತ 10 ವರ್ಷಗಳಿಂದ ವಾಡಿಕೆ ಮಳೆಯಾಗುತ್ತಿಲ್ಲ. ಜಲಮೂಲಗಳು ಬತ್ತುತ್ತಿದೆ. ನೀರಿಗಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ವಾರ್ಥ ತೊರೆದು ಲೋಕ ಕಲ್ಯಾಣಕ್ಕಾಗಿ ಮಳೆಗಾಗಿ ಪೂಜಾ ಕಾರ್ಯಗಳು ಹೆಚ್ಚಬೇಕು ಎಂದು ತಿಳಿಸಿದರು.

ಸಮಿತಿಯ ಕೆ.ಎಂ.ಸ್ವಾಮಿ, ಜಿ.ಜಯಣ್ಣ, ಜಿ.ಶಿವಣ್ಣ, ಸಿ.ಬಿ.ಬಸವರಾಜಪ್ಪ, ಎಚ್.ಮಲ್ಲಿಕಾರ್ಜುನ, ಮಹಂತೇಶ, ಪದ್ಮನಾಭ, ಅಜ್ಜಪ್ಪ ಇತರರಿದ್ದರು.

Leave a Reply

Your email address will not be published. Required fields are marked *