ಚಳ್ಳಕೆರೆ: ರಾಜ್ಯ ಸರ್ಕಾರದಲ್ಲಿ ಯಾದವ ಸಮುದಾಯದ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಸಚಿವ ಸ್ಥಾನ ಕಲ್ಪಿಸುವಂತೆ ಬಿಜೆಪಿ ಮುಖಂಡ ಹಟ್ಟಿ ರುದ್ರಪ್ಪ ಮನವಿ ಮಾಡಿದರು.
’
ನಗರದ ಶ್ರೀಕೃಷ್ಣ ವಿದ್ಯಾಸಂಸ್ಥೆ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಯಾದವ ಸಮುದಾಯಕ್ಕೆ ಸಚಿವಸ್ಥಾನ ನೀಡುವುದಾಗಿ ಸಮಾಜದ ಸ್ವಾಮೀಜಿಗಳಿಗೆ ಯಡಿಯೂರಪ್ಪ ಮಾತು ಕೊಟ್ಟಿದ್ದರು. ಆ ಮಾತು ಉಳಿಸಿಕೊಳ್ಳಬೇಕೆಂದು ಕೋರಿದ್ದಾರೆ.
ದೊಡ್ಡೇರಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಜಿ.ಕೆ. ವೀರಣ್ಣ ಮಾತನಾಡಿದರು. ನಗರಸಭೆ ಸದಸ್ಯ ಪ್ರಕಾಶ್, ಗ್ರಾಪಂ ಸದಸ್ಯ ಶಿವಮೂರ್ತಿ, ಮುಖಂಡರಾದ ಕ್ಯಾತಣ್ಣ, ಚಿಕ್ಕಣ್ಣ, ಕಾಟಪ್ಪನಹಟ್ಟಿ ವೀರೇಶ್, ವಕೀಲ ಶಶಿಧರ್, ರಂಗಪ್ಪ ಮತ್ತಿತರರಿದ್ದರು.