ಚಳ್ಳಕೆರೆಯಲ್ಲಿ ಕಸೂತಿ ಕಾರ್ಯಾಗಾರ

ಚಳ್ಳಕೆರೆ: ಲಂಬಾಣಿ ಸಮುದಾಯದ ವಂಶಪಾರಂಪರ್ಯ ಕಸೂತಿ ಕಲೆ ಉಳಿಸಿ, ಬೆಳೆಸಲು ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಹೆಲ್ಪ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸ್ವಾಮಿನಾಯ್ಕ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಸೂತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಕಸೂತಿ ಹೊಂದಿದ ಉಡುಪುಗಳಿಗೆ ವಿದೇಶದಲ್ಲಿ ಉತ್ತಮ ಬೇಡಿಕೆ ಇದೆ ಎಂದರು.

ಇದು, ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭಗಳಿಸುವ ಉದ್ಯಮವಾಗಿದೆ. ಸಂಸ್ಥೆಯಿಂದ ವ್ಯಾನಿಟಿ ಬ್ಯಾಗ್, ಮೊಬೈಲ್ ಪೌಚ್ ತಯಾರಿಕೆಗೆ ತಾಂಡಾ ವ್ಯಾಪ್ತಿಯಲ್ಲಿ ತರಬೇತಿ ಮೂಲಕ ಕಲೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬಂಜಾರ ಕ್ಷೇಮಾಭಿವೃದ್ಧಿ ಸಂಘದ ತಿಪ್ಪೇಸ್ವಾಮಿ ಮಾತನಾಡಿ, ರಾಂಜಿಹಟ್ಟಿ, ವೀರದಿಮ್ಮನಹಳ್ಳಿ, ಕುರುಡಿಹಳ್ಳಿ ಲಂಬಾಣಿಹಟ್ಟಿ, ಬುಡ್ನಹಟ್ಟಿ ಲಂಬಾಣಿಹಟ್ಟಿ ಸೇರಿ ವಿವಿಧ ಗ್ರಾಮದ ಸಮುದಾಯ ಮಹಿಳೆಯರು ಸಂಘಟಿತರಾಗಬೇಕು ಎಂದರು.

ಈ ಕಲೆಯನ್ನು ಸ್ವಯಂ ಉದ್ಯೋಗವಾಗಿ ರೂಪಿಸಿಕೊಳ್ಳಲು ಹಲವು ಅವಕಾಶಗಳಿವೆ. ವಲಸೆ ಹೋಗಿ ಬದುಕು ಕಟ್ಟಿಕೊಳ್ಳುವುದಕ್ಕಿಂತ ತಾಂಡದಲ್ಲಿದ್ದೆ ದುಡಿಮೆ ಮಾರ್ಗ ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಮುದಾಯದ ಲಕ್ಷ್ಮೀಬಾಯಿ, ಎಸ್.ಗೋವಿಂದನಾಯ್ಕ, ಯಂಕಾನಾಯ್ಕ, ಪ್ರಕಾಶ್‌ನಾಯ್ಕ, ಕೃಷ್ಣಾನಾಯ್ಕ, ಜಯಲಕ್ಷೀ ಬಾಯಿ ಇತರರಿದ್ದರು.

Leave a Reply

Your email address will not be published. Required fields are marked *