More

    ಬೆಂಗಳೂರು ಚಲೋ ಚಳವಳಿ

    ಚಳ್ಳಕೆರೆ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಖಾಯಂ ಗೊಳಿಸುವಂತೆ ಒತ್ತಾಯಿಸಿ ಜ.23 ಮತ್ತು 24ರಂದು ಎಐಟಿಯುಸಿ ಸಂಘಟನೆಯಿಂದ ಬೆಂಗಳೂರು ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಸಂಚಾಲಕ ಸಿ.ವೈ.ಶಿವರುದ್ರಪ್ಪ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 60 ಸಾವಿರ ಅಂಗನವಾಡಿ ಕೇಂದ್ರಗಳಿವೆ. 1,26,000 ಸಾವಿರ ಸಿಬ್ಬಂದಿ ಬದುಕಿನ ಭದ್ರತೆ ಇಲ್ಲದೆ ಸೇವೆ ಮಾಡುತ್ತಿದ್ದಾರೆ. ಕನಿಷ್ಠ 21 ಸಾವಿರ ರೂ. ವೇತನ ಜಾರಿಯಾಗಬೇಕು. ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು. ಮಾಸಿಕ 5 ಸಾವಿರ ರೂ. ಪಿಂಚಣಿ ನೀಡಬೇಕು ಒತ್ತಾಯಿಸಿದರು.

    ಸಂಘಟನೆಯ ಜಿಲ್ಲಾ ಸಂಚಾಲಕ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಜಿಲ್ಲಾ ಉಪಾಧ್ಯಕ್ಷೆ ಉಮಾದೇವಿ, ತಾಲೂಕಾಧ್ಯಕ್ಷೆ ಆರ್.ವೇದಾವತಿ, ಪದ್ಮಾವತಿ, ರುದ್ರಮ್ಮ, ಲಕ್ಷ್ಮೀದೇವಿ, ದುರುಗಮ್ಮ, ಗಿರಿಯಮ್ಮ, ಪದ್ಮಾ, ಸರೋಜಮ್ಮ, ಪ್ರೇಮಕ್ಕ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts