ಅಧಿಕ ಪ್ಲಾಸ್ಟಿಕ್ ಬಳಕೆ ಅಪಾಯ

ಚಳ್ಳಕೆರೆ: ಅಧಿಕ ಪ್ಲಾಸ್ಟಿಕ್ ಬಳಕೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪ್ರಾಚಾರ್ಯ ಬಿ.ಎಸ್.ವಿಜಯ್ ಎಚ್ಚರಿಸಿದರು.

ಎಸ್‌ಆರ್‌ಎಸ್ ಶಾಲಾ ವಿದ್ಯಾರ್ಥಿಗಳಿಂದ ನಗರದ ನೆಹರೂ ವೃತ್ತದಲ್ಲಿ ಗುರುವಾರ ಆಯೋಜಿಸಿದ್ದ ಪರಿಸರ ಜಾಗೃತಿಗಾಗಿ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ಬರಗಾಲದ ಪರಿಸ್ಥಿತಿಗೆ ಮಾನವನ ದುರಾಸೆ ಕಾರಣ. ಗಿಡಮರಗಳ ಕೊರತೆಯಿಂದ ಆರೋಗ್ಯ ಹದಗೆಡುತ್ತಿದೆ. ಪರಿಸರ ನಾಶದಿಂದ ಮನುಷ್ಯನ ಬದುಕಿಗೆ ಅಪಾಯವಿದೆ. ರಸ್ತೆ ಬದಿ ಹಾಗೂ ಮನೆ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದರು. ಸಿಆರ್‌ಪಿ ನಿರಂಜನಮೂರ್ತಿ, ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಆತ್ಮಾನಂದ, ಶಿಕ್ಷಕರಾದ ಅಶೋಕ್, ಅರುಣ್, ಸಹನಾ ಇತರರಿದ್ದರು.

Leave a Reply

Your email address will not be published. Required fields are marked *