ನೀರಿನ ಸಮಸ್ಯೆ ತಡೆಗೆ ಜಾಗೃತಿ ಅಗತ್ಯ

ಚಳ್ಳಕೆರೆ: ನಗರದಲ್ಲಿ ಉದ್ಭವಿಸುತ್ತಿರುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ಹೇಳಿದರು.

ನಮ್ಮ ಚಿತ್ತ ಸ್ವಚ್ಛತೆಯತ್ತ ಯೋಜನೆಯಡಿ ಭಾನುವಾರ ವಾರ್ಡ್ 24ರ ರೈಲ್ವೆ ಬಡಾವಣೆಯಲ್ಲಿ ಆಯೋಜಿಸಿದ್ದ ಸ್ವಚ್ಛತೆ ಹಾಗೂ ಜಲಶಕ್ತಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದಲ್ಲಿ ನೂತನವಾಗಿ ನಿರ್ಮಿಸುವ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಬೇಕು. ಲಭ್ಯವಿರುವ ನೀರನ್ನು ಮಿತವಾಗಿ ಬಳಸಬೇಕು ಎಂದು ತಿಳಿಸಿದರು.

ಮುಖಂಡ ಆರ್.ಪ್ರಸನ್ನಕುಮಾರ್ ಮಾತನಾಡಿ, ಬೆಳೆಯುತ್ತಿರುವ ನಗರದಲ್ಲಿ ಸ್ವಚ್ಛತೆ ಸವಾಲಾಗಿದೆ. ಕಸವನ್ನು ಚರಂಡಿಗಳಲ್ಲಿ ಹಾಕದೇ ನಿಗದ ಕಸದ ಬುಟ್ಟಿಗಳಲ್ಲಿ ಹಾಕುವ ಗುಣ ರೂಢಿಸಿಕೊಳ್ಳಬೇಕು. ಪೌರ ಕಾರ್ಮಿಕರ ಕಾರ್ಯಗಳಿಗೆ ಸ್ಪಂದಿಸಬೇಕು. ನಗರಸಭೆ ಆಯೋಜಿಸುವ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಮನವಿ ಮಾಡಿದರು.

ನಗರಸಭಾ ಸದಸ್ಯರಾದ ಆರ್.ಮಂಜುಳಾ, ವಿರೂಪಾಕ್ಷಪ್ಪ, ಹೊಯ್ಸಳ ಗೋವಿಂದ, ಸುಮಾ ಭರಮಯ್ಯ, ಜೈತುಮ್‌ಬಿ ಇತರರಿದ್ದರು.

Leave a Reply

Your email address will not be published. Required fields are marked *