More

    ವಿವೇಕರ ಚಿಂತನೆ ವಿಶ್ವ ಜಾಗೃತಿ ಸಂದೇಶ

    ಚಳ್ಳಕೆರೆ: ಸ್ವಾಮಿ ವಿವೇಕಾನಂದರ ವಿಚಾರ-ಚಿಂತನೆಗಳೆಲ್ಲವೂ ವಿಶ್ವ ಜಾಗೃತಿಯ ಸಂದೇಶಗಳು ಶಾಸಕ ಟಿ.ರಘುಮೂರ್ತಿ ಹೇಳಿದರು.

    ಸರ್ವಧರ್ಮ ಸಮನ್ವಯ ಸಮಿತಿ ನಗರದ ಶಾಸಕರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿವೇಕಾನಂದರ ದೇಶಾಭಿಮಾನ ಎಲ್ಲರಲ್ಲೂ ಬರಬೇಕು. ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಹೇಳಿದ ಒಂದೊಂದು ಮಾತು ಪ್ರತಿ ಭಾರತೀಯನಿಗೆ ಜಾಗೃತಿ ಗಂಟೆಯಾಗಬೇಕು. ಅವರ ಜೀವನಾದರ್ಶವನ್ನು ಯುವ ಸಮುದಾಯ ಪಾಲಿಸಬೇಕು ಎಂದರು.

    ಶಾರದಾಶ್ರಮದ ಶ್ರೀ ತ್ಯಾಗಮಯಿ ಮಾತನಾಡಿ, ಏಕಾಗ್ರತೆ, ಸೇವೆ, ಅಭ್ಯುದಯ ಮತ್ತು ಧ್ಯಾನದಲ್ಲಿ ಪರಿಪೂರ್ಣರಾಗಿದ್ದ ವಿವೇಕಾನಂದರು, ಯಾವುದೇ ಅಧಿಕಾರ, ಅಂತಸ್ತಿನಿಂದ ನೆಮ್ಮದಿ ಸಿಗುವುದಿಲ್ಲ ಎಂಬ ವಿಚಾರವನ್ನು ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ. ಇದರ ಪಾಲನೆ ಆದರೆ ಇಡೀ ಸಮಾಜ ನೆಮ್ಮದಿಯಿಂದ ಇರುತ್ತದೆ ಎಂದು ತಿಳಿಸಿದರು.

    ಸಾಮಾಜಿಕ ಹೋರಾಟಗಾರ ಎಸ್.ಎಚ್.ಸೈಯದ್ ಮಾತನಾಡಿ, ದೇಶದಲ್ಲಿ ಹಿಂದು ಮತ್ತು ಮುಸಲ್ಮಾನ ಎಂಬ ಎರಡು ಮಹಾ ಧರ್ಮಗಳ ಮಿಲನವಾಗಬೇಕು. ಮಾನವ ಧರ್ಮ, ವೇದಗಳು, ಬೈಬಲ್, ಕುರಾನ್ ಇವುಗಳನ್ನು ಎಲ್ಲರೂ ಒಪ್ಪಿಕೊಳ್ಳುವಂತಾದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

    ಭಗವದ್ಗೀತಾ ಅಭಿಯಾನದ ತಾಲೂಕು ಅಧ್ಯಕ್ಷ ಅನಂತರಾಮ್ ಗೌತಮ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ, ಸೇವಾಲಾಲ್ ಸ್ವಾಮೀಜಿ, ಯೋಗ ಸಂಸ್ಥೆ ಕಾರ್ಯದರ್ಶಿ ಸಿ.ತಿಪ್ಪೇಸ್ವಾಮಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಬಿ.ತಿಪ್ಪೇಸ್ವಾಮಿ, ರೈತ ಸಂಘದ ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಟಿ.ಪ್ರಭುದೇವ್, ಕಿರಣ್ ಶಂಕರ್, ಜಾಮಿಯಾ ಮಸೀದಿ ಮುತ್ತುವಲ್ಲಿ ಅತಿಕುರ್ ರೆಹಮಾನ್, ನಿವೃತ್ತ ಶಿಕ್ಷಕ ಅನ್ವರ್ ಮಾಸ್ಟರ್, ನೇತಾಜಿ ಪ್ರಸನ್ನ, ನಗರಸಭೆ ಮತ್ತು ತಾಪಂ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts