ಚಳ್ಳಕೆರೆ; ಬಸವಣ್ಣ ಅವರ ಅನುಯಾಯಿಗಳಾಗಿ ಬೆಳೆದ ಶರಣರಲ್ಲಿ ಅಂಬಿಗರ ಚೌಡಯ್ಯ ಶ್ರೇಷ್ಠ ವಚನಕಾರರಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ನಿಜಗುಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಂಬಿಗರ ಚೌಡಯ್ಯ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಜನಿಸಿದ ಮಹಾನ್ ಚೇತನ. ವಚನ ಸಾಹಿತ್ಯದ ಮೂಲಕ ಲೌಕಿಕ ಬದುಕಿನ ಒಳಾರ್ಥ ತಿಳಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ ಎಂದರು.
ನಗರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಲೇಔಟ್‌ಗಳಲ್ಲಿ ಖಾಲಿ ನಿವೇಶನ ಅವಕಾಶ ಕಲ್ಪಿಸಿ, ಗಂಗಾಮತಸ್ಥ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ದೊಡ್ಡೇರಿ ಸಮೀಪದ ಸುಣ್ಣಗಾರ ಭೂಮಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ತಾಲೂಕು ಆಡಳಿತಕ್ಕೆ ಸೂಚಿಸಲಾಗುವುದು. ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ನಗರಸಭೆ ಸದಸ್ಯರಾದ ಆರ್.ಮಂಜುಳಾ, ಕವಿತಾ, ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ತಾಪಂ ಸದಸ್ಯರಾದ ಟಿ.ಗಿರಿಯಪ್ಪ, ಜಿ.ವೀರೇಶ್, ರಾಜ್ಯ ಗಂಗಾಮತಸ್ಥ ಸಂಘದ ಉಪಾಧ್ಯಕ್ಷ ಗೋವಿಂದರಾಜು, ಜಿಲ್ಲಾಧ್ಯಕ್ಷ ಎಚ್.ಡಿ.ರಂಗಪ್ಪ, ತಾಲೂಕಾಧ್ಯಕ್ಷ ನಾಗರಾಜ, ಮುಖಂಡರಾದ ಕೃಷ್ಣಮೂರ್ತಿ, ಖಾದರ್, ಬೋರಯ್ಯ ಇದ್ದರು.