ಚಳ್ಳಕೆರೆ: ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಅಜ್ಜನಗುಡಿ ರಸ್ತೆ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಯುವ ಸಮುದಾಯಕ್ಕೆ ವಿವೇಕಾನಂದರ ಬದುಕು ಆದರ್ಶ ಮಾದರಿಯಾಗಬೇಕು. ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳಿಗೆ ದೇಶಾಭಿಮಾನದ ಸಂಕಲ್ಪ ಇರಬೇಕು ಎಂದರು.
ಶಾಲೆಯಲ್ಲಿ 1000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಎಂಟು ಲಕ್ಷ ರೂ. ವೆಚ್ಚದಲ್ಲಿ ಗಣಕ ಯಂತ್ರ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯ ಇರುವ ವಾಟರ್ ಫಿಲ್ಟರ್ ಮತ್ತು ಮೂಲ ಸೌಕರ್ಯಕ್ಕೆ ಅನುಕೂಲ ಮಾಡುವುದಾಗಿ ಭರವಸೆ ನೀಡಿದರು.
ಶಾರಾದಶ್ರಮದ ಮಾತಾಜಿ ತ್ಯಾಗಮಯಿ ಮಾತನಾಡಿ, ದೌರ್ಬಲ್ಯವೇ ಮರಣ ಎಂದು ನಂಬಿದ್ದ ವಿವೇಕರು ಸದಾ ಜಾಗೃತಿ ಮತ್ತು ಸಂಘಟನೆಗೆ ಆದ್ಯತೆ ನೀಡಿದ್ದರು ಎಂದರು.
ತಾಪಂ ಸಾಮಾಜಿಕ ಸಮಿತಿ ಅಧ್ಯಕ್ಷ ಎಚ್.ಆಂಜನೇಯ, ನಗರಸಭೆ ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಟಿ.ಮಂಜುನಾಥ, ವೈ.ಪ್ರಕಾಶ್, ಮುಖಂಡರಾದ ಆರ್.ಪ್ರಸನ್ನಕುಮಾರ್, ಡಿ.ಬೋರಯ್ಯ, ಗಾಂಧಿನಗರ ಕೃಷ್ಣ, ಖಾದರ್, ಮುಖ್ಯ ಶಿಕ್ಷಕಿ ಡಿ.ಆರ್.ಪ್ರಮೀಳಾ ಇದ್ದರು.