More

    ಬುಡಕಟ್ಟು ಸಂಸ್ಕೃತಿ ಜೀವಂತ

    ಚಳ್ಳಕೆರೆ: ತಾಲೂಕಿನಲ್ಲಿ ಬುಡಕಟ್ಟು ಸಂಸ್ಕೃತಿಯ ಧಾರ್ಮಿಕ ಆಚರಣೆಗಳು ಜೀವಂತವಾಗಿವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ತಾಲೂಕಿನ ಪೆತ್ತಮ್ಮರಹಟ್ಟಿಯಲ್ಲಿ ಬುಧವಾರ ಆಯೋಜಿಸಿದ್ದ ಶೂನ್ಯ ಮಾರಮ್ಮದೇವರ ಎತ್ತುಗಳ ಜಾತ್ರಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಗುಡ್ಡದ ಸಾಲು ಹೊಂದಿರುವ ನನ್ನಿವಾಳ ಭಾಗವು ಆಕರ್ಷಣೀಯ ಸ್ಥಳವಾಗಿದೆ. ಪಂಚಾಯಿತಿ ಸುತ್ತಲೂ 34 ಹಟ್ಟಿಗಳಲ್ಲಿ ಬುಡಕಟ್ಟು ಜನ ಜೀವನ ಕಂಡುಕೊಂಡಿದ್ದಾರೆ. ಇಲ್ಲಿನ ಜನರು ಪೂರ್ವಿಕರ ಕಟ್ಟುಪಾಡುಗಳಂತೆ ಈಗಲೂ ಧಾರ್ಮಿಕ ಆಚರಣೆ ಮಾಡುತ್ತಿದ್ದಾರೆ. ಸಮೀಪದ ಬಂಗಾರದೇವರಹಟ್ಟಿಯಲ್ಲಿ ನೂರಾರು ದೇವರ ಎತ್ತುಗಳ ಪಾಲನೆ ಪಾಡಲಾಗುತ್ತಿದೆ ಎಂದರು.

    ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಮಾಜಿ ಅಧ್ಯಕ್ಷ ಟಿ.ರವಿಕುಮಾರ್, ತಾಪಂ ಸದಸ್ಯ ಜಿ.ವೀರೇಶ್, ನಗರಸಭೆ ಸದಸ್ಯರಾದ ಟಿ.ಮಲ್ಲಿಕಾರ್ಜುನ, ವೈ.ಪ್ರಕಾಶ್, ಬಿ.ಟಿ.ರಮೇಶ್‌ಗೌಡ, ಮುಖಂಡರಾದ ದೊರೆ ಬೈಯಣ್ಣ, ಆರ್.ಪ್ರಸನ್ನಕುಮಾರ್, ಸಿದ್ದಾಪುರ ಶೇಖರಪ್ಪ, ಮಂಜುನಾಥ, ಕರಿಬಸಪ್ಪ, ರಾಜಣ್ಣ, ಅಪ್ಪಣ್ಣ, ಚಂದ್ರಣ್ಣ, ನಾಗರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts