ವಿದ್ಯಾರ್ಥಿಗಳಲ್ಲಿ ಉನ್ನತ ಗುರಿ ಇರಲಿ

ಚಳ್ಳಕೆರೆ: ಪ್ರತಿಭಾವಂತ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವ, ಉನ್ನತ ಅಧಿಕಾರಿಗಳಾಗುವ ಗುರಿ ಇರಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಡಿ. ಸುಧಾಕರ್ ತಿಳಿಸಿದರು.

ನಗರದ ಎನ್. ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ಗೌರವವಿದೆ. ಇದನ್ನು ಕಾಪಾಡುವ ಸಂಕಲ್ಪ ಮಾಡಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಶಿಕ್ಷಣ ಸಂಸ್ಥೆಯಲ್ಲಿ ರ‌್ಯಾಂಕ್ ಹಂತದಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ತಲಾ 50 ಸಾವಿರ ರೂ. ಧನ ಸಹಾಯ ನೀಡುವುದಾಗಿ ಘೋಷಿಸಿದರು.

ಸಂಸ್ಥೆಯ ಕಾರ್ಯದರ್ಶಿ ಎಂ.ಆರ್. ನಾರಾಯಣಪ್ಪ, ಪ್ರಾಚಾರ್ಯ ಕೆ. ಟೀಪು, ಉಪನ್ಯಾಸಕ ಎನ್. ಮಂಜುನಾಥ್, ಮುಖ್ಯಶಿಕ್ಷಕಿ ಡಿ.ಆರ್. ಪ್ರಮೀಳಾ, ಜಿ.ಆರ್. ಸತೀಶ್ ಕುಮಾರ್, ರೂಪಾ ಪ್ರಸಾದ್, ವಿಜಯಲಕ್ಷ್ಮಿ, ಹೇಮಂತ್, ವಾಣಿಶ್ರೀ, ದೊರೆಸ್ವಾಮಿ, ರವಿಕುಮಾರ್, ತಿಪ್ಪಾರೆಡ್ಡಿ ಮತ್ತಿತರರಿದ್ದರು.