ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಅಗತ್ಯ

ಚಳ್ಳಕೆರೆ: ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ರೂಪಿಸಲು ಶಾಲೆಗಳು ಕಾರ್ಯೋನ್ಮಖವಾಗಬೇಕು ಎಂದು ಬಿಇಒ ಸಿ.ಎಸ್. ವೆಂಕಟೇಶ್ ಹೇಳಿದರು.
ನಗರದ ಲಾರೆಂಟ್ ಮಂಜರಿ ಹಿರಿಯ ಪ್ರಾಥಮಿಕ ಶಾಲೆಯ ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪಠ್ಯಕ್ಕೆ ಮಕ್ಕಳನ್ನು ಸೀಮಿತಗೊಳಿಸದೆ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಬೇಕು. ಅವರ ಸಮಗ್ರ ಬೆಳೆವಣಿಗೆಗೆ ಪೂರಕವಾಗಿ ಶಾಲೆಯಲ್ಲಿ ಚಟುವಟಿಕೆಗಳು ನಡೆಯಬೇಕು. ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಎಸ್. ಸಿದ್ದೇಶ್ ಮಾತನಾಡಿ, ಮಕ್ಕಳ ಭವಿಷ್ಯ ಗುರುತಿಸುವ ದೂರದೃಷ್ಟಿ ಶಿಕ್ಷಕರಲ್ಲಿ ಇರಬೇಕು. ಮಕ್ಕಳ ಆಸಕ್ತಿ ಗಮನಿಸಿ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಎನ್. ಹನುಮಂತಪ್ಪ, ಮುಖ್ಯಶಿಕ್ಷಕಿ ಕೆ. ರಾಜೇಶ್ವರಿ, ಶಿಕ್ಷಕರಾದ ಮಂಜಣ್ಣ, ಟಿ.ಎಚ್. ಶಾಂತಲಾ, ಬಿ.ವಿ. ಗಿರೀಶ್, ಟಿ.ಎಚ್. ವಸಂತಬಾಬು, ಮೂಡಪ್ಪ, ಓಂಕಾರಪ್ಪ, ಪಿ. ರುದ್ರಮೂರ್ತಿ, ಮಂಜುನಾಥ ಇತರರಿದ್ದರು.