More

    ಆಹಾರ ಪದಾರ್ಥಗಳ ಜ್ಞಾನ ಅವಶ್ಯ

    ಚಳ್ಳಕೆರೆ: ಮಕ್ಕಳ ಕ್ರಿಯಾಶೀಲತೆಗೆ ಪೂರಕವಾಗುವ ಆಹಾರ ಪದ್ಧತಿಗಳ ಕುರಿತು ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ಸಾಯಿಚೇತನ ಶಾಲೆ ಕಾರ್ಯದರ್ಶಿ ಎಂ.ಸರಸ್ವತಮ್ಮ ಹೇಳಿದರು.

    ಇಲ್ಲಿನ ಶಾಂತಿನಗರದ ಬಳಿಯ ಸಾಯಿಚೇತನ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಹಾರ ಮೇಳದಲ್ಲಿ ಮಾತನಾಡಿ, ಒತ್ತಡದ ಜೀವನದಲ್ಲಿ ಬಹುಬೇಗನೆ ಸಿದ್ಧಪಡಿಸಿ ಸೇವಿಸುವ ಆಹಾರ ಪದಾರ್ಥಗಳು ಆರೋಗ್ಯ ಹಾಳು ಮಾಡುತ್ತವೆ. ಮಕ್ಕಳ ಆರೋಗ್ಯದ ಬಗ್ಗೆ ಪಾಲಕರಲ್ಲಿ ಜಾಗೃತಿ ಇರಬೇಕು ಎಂದರು.

    ಮುಖ್ಯಶಿಕ್ಷಕಿ ಜಯಾ ಹೆಗ್ಗಡೆ ಮಾತನಾಡಿ, ಶಿಕ್ಷಣದ ಜತೆ ಮಕ್ಕಳಿಗೆ ವ್ಯವಹಾರಿಕ ಜ್ಞಾನ ಬೆಳೆಸುವುದು ಅಗತ್ಯವಿದೆ. ಮನುಷ್ಯರ ಆರೋಗ್ಯ ಮತ್ತು ಜೀವನಕ್ಕೆ ಅಗತ್ಯವಿರುವ ಆಹಾರ ಪದಾರ್ಥಗಳ ಕುರಿತು ಅರಿವು ಮೂಡಿಸುವುದು ಅವಶ್ಯ ಎಂದು ತಿಳಿಸಿದರು.

    ವಿದ್ಯಾಸಂಸ್ಥೆ ಅಧ್ಯಕ್ಷ ಆರ್.ಶ್ರೀನಿವಾಸಚಾರ್, ಸಹಶಿಕ್ಷಕರಾದ ಆಕಾಂಕ್ಷ, ಪ್ರಿಯಾ, ಅನೂಷಾ, ಪುಷ್ಪಾ, ರಂಜಿತ್ ಕುಮಾರ್, ದಿವ್ಯಾ, ಪರಿಮಳಾ, ಅನಿತಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts