ಬದುಕಿನ ಸುಧಾರಣೆಗೆ ಬೇಕು ಶಿಕ್ಷಣ

ಚಳ್ಳಕೆರೆ: ಬದುಕಿನ ಸುಧಾರಣೆಗೆ ಶಿಕ್ಷಣ ಅಗತ್ಯ ಎಂದು ಗಗನ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆ ಕಾರ್ಯದರ್ಶಿ ಭೀಮನಕೆರೆ ಶಿವಮೂರ್ತಿ ತಿಳಿಸಿದರು.

ಬೆಂಗಳೂರು ಲೋಕಶಿಕ್ಷಣ ನಿರ್ದೇಶನಾಲಯ, ಜಿಲ್ಲಾ ಮತ್ತು ತಾಲೂಕು ಲೋಕಶಿಕ್ಷಣಾ ಸಮಿತಿ ಆಶ್ರಯದಲ್ಲಿ ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕೊಳಚೆ ಪ್ರದೇಶದ ಅನಕ್ಷರಸ್ಥರಿಗೆ ಸಾಕ್ಷರತಾ ಕಾರ್ಯಕ್ರಮ ಮತ್ತು ಬೋಧಕರಿಗೆ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ದೇಶದ ಅಭಿವೃದ್ಧಿ ಸಾಕ್ಷರತೆ ಪ್ರಮಾಣ ಅವಲಂಭಿಸಿದೆ. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ. ಹಲವು ಸಮಸ್ಯೆಗಳಿಂದ ಶಿಕ್ಷಣ ವಂಚಿತರಾದವರಿಗೆ ಓದು, ಬರಹ ಕಲಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ಸೇರಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.

ಜಿಲ್ಲಾ ಸಂಯೋಜಕ ಪ್ರಭಾಕರ್, ಜಿಲ್ಲಾ ಸಮಿತಿ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿದರು. ಸಂಸ್ಥೆಯ ಪಿ. ಜಯಣ್ಣ, ಎನ್. ಪ್ರಕಾಶ್, ಪಿ. ರೇಣುಕಮ್ಮ, ಲೋಕಶಿಕ್ಷಣ ಸಮಿತಿ ತಾಲೂಕು ಸಂಯೋಜಕ ಸಿ. ಗುರುಸಿದ್ದಮೂರ್ತಿ, ದಿಲೀಪ್ ಇತರರಿದ್ದರು.

Leave a Reply

Your email address will not be published. Required fields are marked *