ಕತ್ತೆಗಳಿಗೆ ಕಂಕಣ ಭಾಗ್ಯ

ಚಳ್ಳಕೆರೆ: ತಾಲೂಕಿನ ಬೂದಿಹಳ್ಳಿ ಗ್ರಾಮದಲ್ಲಿ ಗುರುವಾರ ಮಳೆಗಾಗಿ ಗ್ರಾಮದೇವತೆಗೆ ವಿಶೇಷ ಪೂಜೆ ನೆರವೇರಿಸಿದ ಗ್ರಾಮಸ್ಥರು, ಕತ್ತೆಗಳ ಮದುವೆ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ತಾಲೂಕಿನಲ್ಲಿ ಹತ್ತು ವರ್ಷಗಳಿಂದ ಸಕಾಲಕ್ಕೆ ಮಳೆ ಬೀಳದೆ ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಸ್ತುತ ವರ್ಷ ಮುಂಗಾರು ಆರಂಭವಾಗಿದ್ದರೂ ನಿರೀಕ್ಷಿತ ಮಳೆಯಾಗಿಲ್ಲ. ಜಮೀನು ಉಳುಮೆ ಮಾಡಿದ ರೈತರು ವರುಣನ ಆಗಮನಕ್ಕೆ ಕಾಯುತ್ತಿದ್ದಾರೆ.

ಕೆಲ ಗ್ರಾಮಗಳಲ್ಲಿ ಮಳೆಗೆ ಪ್ರಾರ್ಥಿಸಿ ವಿಶೇಷ ಭಜನೆ, ಬುಡ್ಡೆ ಕಲ್ಲಿಗೆ ನೂರೊಂದು ಕೊಡ ನೀರು ಸುರಿಯುವ ಸಂಪ್ರದಾಯ ಸೇರಿ ವಿವಿಧ ಪೂಜೆ, ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

Leave a Reply

Your email address will not be published. Required fields are marked *