More

  ಕಷ್ಟದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ

  ಚಳ್ಳಕೆರೆ: ಕಷ್ಟದ ಪರಿಸ್ಥಿತಿಗೆ ಜನತೆ ಎದೆಗುಂದಬಾರದು. ಧೈರ್ಯದಿಂದ ಮುನ್ನುಗ್ಗಬೇಕು ಎಂದು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

  ನಗರದ ಶಾಸಕರ ಭವನದಲ್ಲಿ ಮಂಗಳವಾರ ಸವಿತಾ ಸಮಾಜದವರು, ಆಟೋ ಮತ್ತು ಕಾರು ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದರು.

  ಕರೊನಾ ಸಂಕಷ್ಟದಲ್ಲಿರುವವರಿಗೆ ಶಾಸಕರು ನೆರವಿನ ಹಸ್ತ ಚಾಚುತ್ತಿರುವುದು ಸಂತಸದ ಸಂಗತಿ ಎಂದರು.

  ಶಾಸಕ ಟಿ. ರಘುಮೂರ್ತಿ ಮಾತನಾಡಿ, ಲಾಕ್‌ಡೌನ್‌ನಿಂದ ದುಡಿವ ವರ್ಗ ಕಷ್ಟಕ್ಕೆ ಒಳಗಾಗಿದೆ. ಇದು ಜಿಲ್ಲೆ, ರಾಜ್ಯದ ಸಮಸ್ಯೆಯಲ್ಲ. ಇಡೀ ಪ್ರಪಂಚದ ತೊಂದರೆ. ಇದನ್ನು ಎಚ್ಚರದಿಂದ ಎದುರಿಸಬೇಕು ಎಂದರು.

  ಪ್ರಕಾಶ್ ಐರನ್ ಸ್ಟೀಲ್ ಕಂಪನಿ ಮಾಲೀಕರು ತಾಲೂಕಿನ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದರು.

  ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಗೀತಾಬಾಯಿ, ರೈತ ಮುಖಂಡ ಕೆ.ಪಿ. ಭೂತಯ್ಯ, ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ್, ಸಂಪಿಗೆ ತಿಪ್ಪೇಸ್ವಾಮಿ, ಆರ್.ಎ. ದಯಾನಂದಮೂರ್ತಿ, ಎಂ. ಸರಸ್ವತಮ್ಮ, ಆರ್. ಪ್ರಸನ್ನಕುಮಾರ್, ಗಾಂಧಿನಗರ ಕೃಷ್ಣ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts