ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ಸಮಾಜವಾದಿ

ಚಳ್ಳಕೆರೆ: ಡಾ.ಬಿ.ಆರ್. ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ಸಮಾಜವಾ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.

ಅಂಬೇಡ್ಕರ್ ಜಯಂತಿ ಅಂಗವಾಗಿ ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಬಹು ಸಂಸ್ಕೃತಿಯ ದೇಶದ ನಾಗರಿಕರಿಗೆ ಸಮಾನ ಅವಕಾಶ ನೀಡಲು ಸಂವಿಧಾನ ಬದ್ಧವಾಗಿದೆ ಎಂದರು.
ಜೀವನದ ಸಾಧಕರಿಗೆ ಅಂಬೇಡ್ಕರ್ ತತ್ವ-ಸಿದ್ಧಾಂತ, ಚಿಂತನೆಗಳು ಆಧಾರವಾಗಿವೆ. ಪ್ರತಿಯೊಬ್ಬರು ಅವರ ಚಿಂತನೆ ಅಳವಡಿಸಿಕೊಳ್ಳುವ ಜತೆ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಟಿ. ಗಿರಿಯಪ್ಪ, ನಗರಸಭೆ ಸದಸ್ಯರಾದ ಬಿ.ಟಿ. ರಮೇಶ್‌ಗೌಡ, ರಾಘವೇಂದ್ರ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಗಳಾದ ಆರ್. ಪ್ರಸನ್ನಕುಮಾರ್, ಚೌಳೂರು ಪ್ರಕಾಶ್ ಇತರರಿದ್ದರು.