ಸಮೃದ್ಧ ಮರಗಳು ಬರಗಾಲಕ್ಕೆ ಪರಿಹಾರ

ಚಳ್ಳಕೆರೆ: ಸಮೃದ್ಧಿ ಗಿಡಮರಗಳು ಬರಗಾಲಕ್ಕೆ ಶಾಶ್ವತ ಪರಿಹಾರ ಎಂದು ತಾಪಂ ಸದಸ್ಯ ರಾಮರೆಡ್ಡಿ ತಿಳಿಸಿದರು.

ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.

ಸಂಸ್ಥೆಯಿಂದ ಹಲವು ಕಾರ್ಯಕ್ರಮಗಳಿಂದ ಗ್ರಾಮೀಣ ಮಹಿಳೆಯರಲ್ಲೂ ಆರ್ಥಿಕ ಜಾಗೃತಿಯಾಗಿದೆ. ಕುಟುಂಬ ನಿರ್ವಹಣೆ ಜತೆ ಉಳಿತಾಯ ಮನೋಭಾವ, ಸ್ವಚ್ಛತೆ ಹಾಗೂ ಪರಿಸರ ಕಾಳಜಿ ಮೂಡುತ್ತಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಶಕುಂತಲಮ್ಮ, ಸಂಸ್ಥೆ ಕೃಷಿ ಅಧಿಕಾರಿ ಪಕ್ಕೀರಪ್ಪ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.