ವಿಶ್ವೇಶ್ವರ ಭಟ್ಟರ ವಿರುದ್ಧ ದೂರಿಗೆ ಆಕ್ರೋಶ

ಚಳ್ಳಕೆರೆ: ವಿಶ್ವೇಶ್ವರ ಭಟ್ ವಿರುದ್ಧ ದಾಖಲಾಗಿರುವ ದೂರು ಹಿಂಪಡೆಗೆ ಆಗ್ರಹಿಸಿ ತಾಲೂಕು ಪತ್ರಕರ್ತರ ಒಕ್ಕೂಟ ಬುಧವಾರ ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಇತ್ತೀಚೆಗೆ ಪತ್ರಕರ್ತರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳ ತಡೆಗೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತರಾದ ಬಿ.ವಿ.ಮಂಜುನಾಥ್, ನಾವೆಲ್ಲಾ ಮಹೇಶ್, ಬಿ.ಲೋಕೇಶ್, ಡಿ.ಈಶ್ವರಪ್ಪ, ಗೋಪನಹಳ್ಳಿ ಶಿವಣ್ಣ, ಕೊರ‌್ಲಕುಂಟೆ ತಿಪ್ಪೇಸ್ವಾಮಿ, ಸಿ.ಪಿ.ರಂಗನಾಥ್, ರಾಮಾಂಜಿನೇಯ, ದ್ಯಾಮರಾಜ್, ಬಷೀರ್ ಇತರರಿದ್ದರು.