ಕುರುಡಿಹಳ್ಳಿ ಉಪ ಆರೋಗ್ಯ ಕೇಂದ್ರದಲ್ಲಿಲ್ಲ ಸಿಬ್ಬಂದಿ

ಚಳ್ಳಕೆರೆ: ತಾಲೂಕಿನ ಕುರುಡಿಹಳ್ಳಿ ಗ್ರಾಮದಲ್ಲಿರುವ ಉಪ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಯದಲ್ಲಿ ವೈದ್ಯರು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಪಂ ಸದಸ್ಯರು ದೂರಿದ್ದಾರೆ.

ಗ್ರಾಮದಲ್ಲಿ ಮೂರು ಸಾವಿರ ಜನಸಂಖ್ಯೆ ಇದೆ. ರಾತ್ರಿ ವೇಳೆ ಸಂಭವಿಸುವ ಅನಾಹುತಗಳಿಗೆ ಆರೋಗ್ಯ ಕೇಂದ್ರವೇ ಆಧಾರ. ಇತ್ತೀಚಿನ ಐದಾರು ವರ್ಷಗಳಿಂದ ರಾತ್ರಿ ವೇಳೆ ಸಿಬ್ಬಂದಿ ಇಲ್ಲದಂತಾಗಿದೆ.

ಹಾವು ಕಚ್ಚಿದ್ದ 12 ವರ್ಷದ ಬಾಲಕಿಯೊಬ್ಬಳು ಇತ್ತೀಚೆಗೆ ಪ್ರಾಥಮಿಕ ಚಿಕಿತ್ಸೆ ದೊರೆಯದೇ ಚಳ್ಳಕೆರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಳು.

ಇನ್ನು ಗರ್ಭಿಯರನ್ನು ರಾತ್ರಿ ವೇಳೆ ಆಟೋ, ಬೈಕ್‌ಗಳಲ್ಲಿ ನಗರಕ್ಕೆ ಕರೆದೊಯ್ಯುವ ಪರಿಸ್ಥಿತಿ ಸಾಮಾನ್ಯವಾಗಿದ್ದು, ಈ ಸಂದರ್ಭ ಅನೇಕರು ಸಮಸ್ಯೆಗೆ ಸಿಲುಕಿದ್ದಾರೆ.

ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೇಂದ್ರದಲ್ಲಿ ರಾತ್ರಿ ವೇಳೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ವ್ಯವಸ್ಥೆ ಮಾಡಬೇಕೆಂದು ಜನಪ್ರತಿನಿಧಿಗಳಾಗಿರುವ ಪಿ.ವಿಶ್ವನಾಥ್, ವೈ.ನಾಗರಾಜ, ಶಾರದಮ್ಮ, ಲಕ್ಷ್ಮೀದೇವಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *