ವಿಜಯವಾಣಿ ಕಾಳಜಿಗೆ ಮೆಚ್ಚುಗೆ

ಚಳ್ಳಕೆರೆ: ಒಳ್ಳೆಯ ಪರಿಸರದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಮಹದೇವ ವಿದ್ಯಾಸಂಸ್ಥೆ ಅಧ್ಯಕ್ಷ ಆರ್. ಶ್ರೀನಿವಾಸಚಾರ್ ತಿಳಿಸಿದರು.

ನಗರದ ಸಾಯಿಚೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜಯವಾಣಿ ಪತ್ರಿಕೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಜಯವಾಣಿ ಮಾಧ್ಯಮ ಸಂಸ್ಥೆಗೆ ಸಾಮಾಜಿಕ ಹಾಗೂ ಪರಿಸರ ಕಳಕಳಿ ಇದೆ. ಮಹಿಳೆಯರ ಜಾಗೃತಿಗಾಗಿ ರಸಪ್ರಶ್ನೆ ಕಾರ್ಯಕ್ರಮ, ಪ್ರಗತಿಪರ ಚಿಂತನೆ ಸೇರಿ ಪರಿಸರ ಜಾಗೃತಿಗೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಸರಸ್ವತಮ್ಮ ಮಾತನಾಡಿ, ಜನಸಂಖ್ಯೆ ಹೆಚ್ಚುವ ಜತೆ ಪರಿಸರ ನಾಶವಾಗುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ. ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಮನೆ ಸುತ್ತ ಗಿಡ ಬೆಳೆಸುವ ಆಸಕ್ತಿ ಬೆಳೆಸಿಕೊಳ್ಳಬೇಕು. ಮರಗಳಿದ್ದಲ್ಲಿ ಬರಗಾಲಕ್ಕೆ ಅವಕಾಶವಿಲ್ಲ ಎಂದರು.

ಗ್ರಾಪಂ ಸದಸ್ಯ ಕೊ.ತಿಪ್ಪೇಸ್ವಾಮಿ, ಶಿಕ್ಷಕರಾದ ಜಯಹೆಗಡೆ, ರಂಜಿತ್‌ಕುಮಾರ್, ದಿವ್ಯಾ, ಪರಿಮಳಾ, ಅನಿತಾಲಕ್ಷ್ಮೀ, ಶಶಿಕಲಾ ಇತರರಿದ್ದರು.

Leave a Reply

Your email address will not be published. Required fields are marked *