ದಲಿತ ಸಂಘರ್ಷ ಸಮಿತಿ ಧರಣಿ

ಚಳ್ಳಕೆರೆ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತ ವ್ಯಕ್ತಿ ಮೇಲೆ ದೌರ್ಜನ್ಯ ಎಸೆಗಿರುವುದನ್ನು ಖಂಡಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು.

ಇತ್ತೀಚಿಗೆ ದಲಿತರ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಕಾನೂನು ರಕ್ಷಣೆ ಇಲ್ಲದಂತಾಗಿದೆ. ಗುಂಡ್ಲುಪೇಟೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ ಅವರಿಗೆ ಮನವಿ ಸಲ್ಲಿಸಿದರು.

ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ನಗರಂಗೆರೆ ಶ್ರೀನಿವಾಸ್, ಕಾರ್ಯಕರ್ತರಾದ ವೆಂಕಟೇಶ್, ನಾಗರಾಜ್, ಎಚ್.ಲಂಕೇಶ್, ಮಂಜುನಾಥ, ಓಂಕಾರಮೂರ್ತಿ, ವೇದಮೂರ್ತಿ ಇತರರಿದ್ದರು.

Leave a Reply

Your email address will not be published. Required fields are marked *