ಜೂ.2ರಂದು ಅಂಬೇಡ್ಕರ್ ಜಯಂತಿ

ಚಳ್ಳಕೆರೆ: ಅಂಬೇಡ್ಕರ್ ಸೇನಾ ಸಮಿತಿಯಿಂದ ತಾಲೂಕಿನ ಸಿರಿವಾಳ ಓಬಳಾಪುರ ಗ್ರಾಮದಲ್ಲಿ ಜೂ.2ರಂದು ಅಂಬೇಡ್ಕರ್ ಜಯಂತಿ ಹಮ್ಮಿಕೊಳ್ಳಲಾಗಿದೆ.

ಮಾದಿಗ ಆದಿಜಾಂಬವ ಕೋಡಿಹಳ್ಳಿ ಮಠದ ಶ್ರೀ ಷಡಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ಎ.ನಾರಾಯಣಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಶಾಸಕ ಬಿ.ಶ್ರೀರಾಮುಲು ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ವಡ್ಡಗೆರೆ ನಾಗರಾಜಯ್ಯ, ಶಾಸಕ ಟಿ.ರಘುಮೂರ್ತಿ, ಜಿಪಂ ಸದಸ್ಯರಾದ ಮುಂಡರಗಿ ನಾಗರಾಜ್, ಬಿ.ಪಿ.ಪ್ರಕಾಶ್‌ಮೂರ್ತಿ, ಚಂದ್ರಿಕಾ ಶ್ರೀನಿವಾಸ್, ಮುಖಂಡರಾದ ಎಂ.ಶಿವಮೂರ್ತಿ, ಕೆ.ವೀರಭದ್ರಯ್ಯ ಟಿ.ವಿಜಯಕುಮಾರ್, ಭೀಮನಕೆರೆ ಶಿವಮೂರ್ತಿ, ಡಿ.ಒ.ಮುರಾರ್ಜಿ, ಹನುಮಂತಪ್ಪ ಪೂಜಾರ್ ಭಾಗವಹಿಸುವರು.

Leave a Reply

Your email address will not be published. Required fields are marked *