ರಸ್ತೆ ಗಿಡ ಬೆಳೆಸಲು ಶಾಸಕ ಸೂಚನೆ

ಚಳ್ಳಕೆರೆ: ನಗರದ ಶಾಲಾ, ಕಾಲೇಜು ಆವರಣ ಸೇರಿ ಪ್ರಮುಖ ರಸ್ತೆ ಬದಿಯಲ್ಲಿ ಗಿಡ ಬೆಳೆಸುವ ಮೂಲಕ ಪರಿಸರದಲ್ಲಿ ಹಸಿರು ಹರಡಲು ಆದ್ಯತೆ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅರಣ್ಯ ಇಲಾಖೆಯಿಂದ ನೂತನ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರಸಭೆ ಸದಸ್ಯರಾದ ಟಿ. ಮಲ್ಲಿಕಾರ್ಜುನ, ರಾಘವೇಂದ್ರ, ಮುಖಂಡರಾದ ಟಿ. ಪ್ರಭುದೇವ್, ಆರ್. ಪ್ರಸನ್ನಕುಮಾರ್, ಪ್ರಹ್ಲಾದ, ಕೃಷ್ಣಾ, ಅರಣ್ಯ ಇಲಾಖೆ ಅಧಿಕಾರಿ ಎಸ್. ಸುರೇಶ್, ಪಿಎಸ್‌ಐ ಸತೀಶ್ ನಾಯ್ಕ ಇತರರಿದ್ದರು.

Leave a Reply

Your email address will not be published. Required fields are marked *