ಸಂಘಟನಾ ಶಕ್ತಿಗೆ ಕ್ರೀಡೆ ಸಹಕಾರಿ

ಚಳ್ಳಕೆರೆ: ಕ್ರೀಡೆಗಳು ಸಂಘಟನಾ ಶಕ್ತಿ ಹೆಚ್ಚಿಸುವ ಜತೆಗೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿವೆ ಎಂದು ಜಿಪಂ ಸದಸ್ಯ ಎನ್.ಓಬಳೇಶ್ ತಿಳಿಸಿದರು.

ತಾಲೂಕಿನ ತಳಕು ಹೋಬಳಿ ವ್ಯಾಪ್ತಿಯ ಚಿಕ್ಕಹಳ್ಳಿಯಲ್ಲಿ ಯುವಕ ಸಂಘ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಇವೆರಡನ್ನೂ ಸಮನಾಗಿ ಸ್ವೀಕರಿಸಬೇಕು. ಕ್ರಿಕೆಟ್ ಕ್ರಿಯಾಶೀಲ ಆಟ. ದೇಶದೆಲ್ಲೆಡೆ ಚಿರಪರಿಚಿತ ಕ್ರೀಡೆ. ಇದರಲ್ಲಿ ಯಾರಿಗೆ ಕೌಶಲವಿರುತ್ತದೆಯೋ ಅವರು ಯಶಸ್ಸು ಗಳಿಸುತ್ತಾರೆ ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ.ಪಿ.ಜಯಪಾಲಯ್ಯ ಮಾತನಾಡಿ, ಕ್ರೀಡೆ ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗಬಾರದು. ಭವಿಷ್ಯ ರೂಪಣೆಯ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ, ಮುಖಂಡರಾದ ಹೊನ್ನೂರು ಗೋವಿಂದಪ್ಪ, ಎಚ್.ವಿ.ಪ್ರಕಾಶ್, ಪಾಪಣ್ಣ, ಮಂಜಣ್ಣ, ಕರಿಬಸಣ್ಣ ಇತರರಿದ್ದರು.

Leave a Reply

Your email address will not be published. Required fields are marked *