ಭೋವಿ ಹಾಸ್ಟೆಲ್ ಜಮೀನು ರಕ್ಷಿಸಿ

ಚಳ್ಳಕೆರೆ: ಒತ್ತುವರೆ ಆಗುತ್ತಿರುವ ಭೋವಿ ಸಮಯದಾಯದ ವಿದ್ಯಾರ್ಥಿ ನಿಲಯ ಜಮೀನು ರಕ್ಷಣೆಗೆ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭೋವಿ ಸಮಾಜದ ಮುಖಂಡರು, ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಜಿಲ್ಲಾಡಳಿತದಿಂದ 1975ರಲ್ಲಿ ಭೋವಿ ಸಮಾಜದ ವಿದ್ಯಾರ್ಥಿ ನಿಲಯಕ್ಕೆ ನಗರದ ಪ್ರವಾಸಿ ಮಂದಿರದ ಹಿಂಭಾಗ 1 ಎಕರೆ 8 ಗುಂಟೆ ಜಮೀನು ಮಂಜೂರಾಗಿತ್ತು. ಅಲ್ಲಿ ವಿದ್ಯಾರ್ಥಿ ನಿಲಯ, ಸಮುದಾಯ ಭವನ ನಿರ್ಮಾಣ ಮಾಡುವ ಬಗ್ಗೆ ಸಮಾಜ ಚಿಂತನೆ ನಡೆಸಿತ್ತು.
ಕೆಲ ಪ್ರಭಾವಿಗಳು ಸ್ಥಳೀಯ ಸಂಸ್ಥೆಯಿಂದ ಕಟ್ಟಡ ಪರವಾನಗಿ ಪಡೆದು ಅಕ್ರಮವಾಗಿ ಈ ಜಮೀನನ್ನು ಒತ್ತುವರಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಪಂ ಮಾಜಿ ಸದಸ್ಯ ಎ.ಅನಿಲ್‌ಕುಮಾರ್, ತಾಪಂ ಸದಸ್ಯ ಎಚ್.ಆಂಜನೇಯ, ಮುಖಂಡರಾದ ಸೋಮಗುದ್ದು ಎಚ್.ತಿಪ್ಪೇಸ್ವಾಮಿ, ರಂಗಸ್ವಾಮಿ, ಜಗದೀಶ್, ತಿಮ್ಮಣ್ಣ, ಜಿ.ತಿಪ್ಪೇಸ್ವಾಮಿ ಇತರರಿದ್ದರು.