ಕಾಂಗ್ರೆಸ್ ಬಿತ್ತಿದ ಹಿಂದೂ ಭಯೋತ್ಪಾದನೆ ಎಂಬ ಹಸಿಸುಳ್ಳು

Latest News

ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ರಾಜ್ಯ ಬಿಜೆಪಿ ಸರ್ಕಾರ ಅಗೌರವ ತೋರಿದೆ ಎಂದು ಆರೋಪಿಸಿ ಚಂದಕವಾಡಿ ಹೋಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ವತಿಯಿಂದ ಭಾನುವಾರ...

ಪಕ್ಷಾಂತರಿಗಳ ವಿರುದ್ಧ ಆಕ್ರೋಶ

ಮೈಸೂರು: ಪಕ್ಷಾಂತರಿಗಳ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ರೈಲ್ವೆ ನಿಲ್ದಾಣದ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು. ಪಕ್ಷಾಂತರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು...

ನಗರದಲ್ಲಿ ಪೊರಕೆ ಹಿಡಿದು ಪ್ರತಿಭಟನೆ

Whispers and protests in the city ಚಾಮರಾಜನಗರ: ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಶಿಕ್ಷಣ ಇಲಾಖೆಯು...

ಸುಪ್ರೀಂ ಕೋರ್ಟ್​ ನ್ಯಾಯಾಧೀಶ ಎಸ್​​. ಅಬ್ದುಲ್ ನಜೀರ್ ಅವರಿಗೆ Z ಕೆಟಗರಿ ಭದ್ರತೆ

ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ತೀರ್ಪು ನೀಡಿದ ಪೀಠದಲ್ಲಿದ್ದ ನ್ಯಾಯಾಧೀಶ ಎಸ್​​.ಅಬ್ದುಲ್ ನಜೀರ್​ ಅವರಿಗೆ "Z" ಕೆಟಗರಿ ಭದ್ರತೆ ನೀಡಲು ಕೇಂದ್ರ ಸರ್ಕಾರ...

ಸಂಘಗಳಿಗೆ ಸಾಲ ಪ್ರಮಾಣ ಕಡಿತ

ಶೃಂಗೇರಿ: ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಶೇ.22ರಷ್ಟು ರೈತರು ಸಾಲ ಸೌಲಭ್ಯ ಪಡೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ದಿಕ್ಕಿನಲ್ಲಿ ಆಲೋಚಿಸಿ...

ಕಾಂಗ್ರೆಸ್ ತನ್ನ ಲಾಭಕ್ಕಾಗಿ ‘ಹಿಂದೂ ಭಯೋತ್ಪಾದನೆ’ ಎಂಬ ಶಬ್ದ ಹುಟ್ಟುಹಾಕಿತು. ಆದರೆ, ಅದೆಲ್ಲವೂ ಶುದ್ಧ ರಾಜಕೀಯ ಪ್ರಹಸನ ಎಂಬುದು ನ್ಯಾಯಾಲಯದ ಇತ್ತೀಚಿನ ತೀರ್ಪಿನಿಂದ ಸ್ಪಷ್ಟವಾಗಿದೆ. ಚುನಾವಣೆ ಹೊತ್ತಲ್ಲಿ ರಾಜಕೀಯ ಪಕ್ಷಗಳು ಮತ್ತೆ ಹಿಂದುತ್ವ ಮಂತ್ರ ಜಪಿಸುವ ಮೂಲಕ ಇದು ಚರ್ಚೆಯ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೆಲ ವಾಸ್ತವಗಳನ್ನು ಅವಲೋಕಿಸೋಣ.

| ಚಕ್ರವರ್ತಿ ಸೂಲಿಬೆಲೆ

ವಿಶೇಷ ನ್ಯಾಯಾಲಯ ಸ್ವಾಮಿ ಅಸೀಮಾನಂದರ ವಿರುದ್ಧದ ಭಯೋತ್ಪಾದನೆಯ ಪ್ರಕರಣವನ್ನು ಕೈಬಿಡುವುದರೊಂದಿಗೆ ಕಾಂಗ್ರೆಸ್ಸಿನ ಮತ್ತೊಂದು ಮುಖವಾಡ ಕಳಚಿದಂತಾಗಿದೆ. 2007ರಲ್ಲಿ ಸಂಝೆೊತಾ ಎಕ್ಸ್​ಪ್ರೆಸ್ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದರು ಭಯೋತ್ಪಾದನೆಯ ಸೂತ್ರಧಾರರೆಂದು ಬಂಧಿಸಲ್ಪಟ್ಟಿದ್ದರು. ಸಂಝೆೊತಾ ವಾರಕ್ಕೆರಡು ಬಾರಿ ದೆಹಲಿ ಮತ್ತು ಲಾಹೋರ್​ಗಳನ್ನು ಬೆಸೆಯುವ ರೈಲು. ನಾಲ್ಕು ಬೋಗಿಗಳು ಕಾಯ್ದಿರಿಸಿದವಾಗಿದ್ದರೆ ಉಳಿದ ಮೂರು ಸಾಮಾನ್ಯ ಬೋಗಿಗಳು. 2007 ಫೆಬ್ರವರಿ 18ರ ಮಧ್ಯರಾತ್ರಿ ರೈಲು ಪಾನಿಪತ್​ನ ದಿವಾನಾ ದಾಟಿದೊಡನೆ ಸಾಮಾನ್ಯ ಬೋಗಿಗಳಲ್ಲಿ (ಸೂಟ್​ಕೇಸ್​ನಲ್ಲಿ) ಇಡಲಾಗಿದ್ದ ಬಾಂಬು ಸಿಡಿದು 70 ಜನ ಪ್ರಾಣ ಕಳೆದುಕೊಂಡರು. ಹೀಗೆ ಸತ್ತವರಲ್ಲಿ ಬಹುತೇಕರು ಪಾಕಿಸ್ತಾನಿಯರೇ ಆಗಿದ್ದರು.

ಅಂದಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಭಾರತ ಎರಡೂ ಸರ್ಕಾರವನ್ನು ಬೆಚ್ಚಿಬೀಳಿಸಿದ ಪ್ರಕರಣವಿದು. ಸಾವನ್ನಪ್ಪಿದವರು ಭಾರತೀಯರು ಮತ್ತು ಹಿಂದೂಗಳೇ ಆಗಿದ್ದರೆ ಬಹುಶಃ ಎರಡೂ ರಾಷ್ಟ್ರಗಳು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಪಾಕಿಸ್ತಾನಿಯರನ್ನೇ ಗುರಿಯಾಗಿರಿಸಿಕೊಂಡು ಈ ದಾಳಿ ಮಾಡಲಾಗಿತ್ತಾದ್ದರಿಂದ ಭಾರತವಂತೂ ಅಚ್ಚರಿಗೊಳಗಾಗಿತ್ತು, ಪಾಕಿಸ್ತಾನ ಆಶ್ಚರ್ಯದ ನಟನೆ ಮಾಡುತ್ತಿತ್ತು. ಸಹಜವಾಗಿಯೇ ಪಾಕಿಸ್ತಾನದತ್ತ ಇದ್ದ ಅನುಮಾನ ಆರಂಭದ ತನಿಖೆಗಳಲ್ಲಿ ಒಂದಷ್ಟು ಗೆಲುವನ್ನು ಸಾಧಿಸಿಕೊಟ್ಟಿತು. ಸೂಟ್​ಕೇಸನ್ನು ಬಿಸಾಡಿದ ವ್ಯಕ್ತಿ ಸಿಕ್ಕಿಬಿದ್ದಿದ್ದ. ಅವನ ವಿಚಾರಣೆ ನಡೆಸಿದಾಗ ಆತ ಪಾಕಿಸ್ತಾನ ಪ್ರಜೆಯೆಂದೂ ಸೂಕ್ತವಾದ ಪಾಸ್​ಪೋರ್ಟ್ ಇಲ್ಲದೆ ಭಾರತಕ್ಕೆ ಬಂದಿದ್ದನೆಂದೂ ಗೊತ್ತಾಯ್ತು. ಆದರೆ ಪೊಲೀಸರು ಅವನು ಕುಡಿದಿದ್ದಾನೆ ಎಂಬ ಹೇಳಿಕೆಯನ್ನು ಕೊಟ್ಟು ಬಿಟ್ಟುಬಿಟ್ಟರು! ಮುಂದೆ ಸೂಟ್​ಕೇಸನ್ನು ಮಾರಾಟ ಮಾಡಿದ್ದ ಇಂದೋರ್​ನ ಇಬ್ಬರು ವ್ಯಾಪಾರಿಗಳನ್ನು ಬಂಧಿಸಲಾಯ್ತು. ಅವರಿಂದ ಬಹುಮುಖ್ಯ ಮಾಹಿತಿಯೇನೂ ಸಿಗಲಿಲ್ಲ. ಆದರೆ ಈ ಬಾಂಬುಗಳು ಸಿಡಿಯುವ ಮುನ್ನ ರೈಲು ವೇಗವನ್ನು ಸ್ವಲ್ಪ ನಿಧಾನ ಮಾಡಿದಾಗ ಅದರಿಂದ ಇಳಿದು ಹೋದ 25ರ ತರುಣನೊಬ್ಬನನ್ನು ನಂತರ ಬಂಧಿಸಿ ವಿಚಾರಣೆಯನ್ನೂ ನಡೆಸಲಾಗಿತ್ತು.

ಕಾಂಗ್ರೆಸ್ಸಿನ ಮಹಾಸಂಚು: ಈ ವೇಳೆಗಾಗಲೇ ಕಾಂಗ್ರೆಸ್ಸು ಇದನ್ನು ಹಿಂದೂಗಳ ತಲೆಗೆ ಕಟ್ಟಿ ಹೇಗಾದರೂ ಮಾಡಿ ‘ಹಿಂದೂ ಭಯೋತ್ಪಾದನೆ’ ಎಂಬ ವಿಷಬೀಜವನ್ನು ಬಿತ್ತಿ ಭಯೋತ್ಪಾದನೆಗೂ ಇಸ್ಲಾಮಿಗೂ ಇರುವ ಸಂಬಂಧವನ್ನು ಮುಗಿಸಿಬಿಡ ಬೇಕೆಂಬ ಹೊಂಚು ಹಾಕುತ್ತಿತ್ತು! ಇದಕ್ಕೆ ಪೂರಕವಾಗಿ ಬೇಕಾಗಿ ರುವ ಯಾವ ಮಾಹಿತಿಯೂ ಅವರಿಗೆ ಸಿಗುತ್ತಿರಲಿಲ್ಲ ಅಷ್ಟೇ. ಸಿಕ್ಕ ಎಲ್ಲ ಮಾಹಿತಿಗಳೂ ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕ ಸಂಘಟನೆಗಳತ್ತಲೇ ತಿರುಗಿದ್ದವು.

ಅವೆಲ್ಲವನ್ನೂ ಬದಿಗಿಟ್ಟು ಭಯೋ ತ್ಪಾದಕ ನಿಗ್ರಹ ದಳ ಹಿಂದೂಗಳನ್ನು ಗುರಿಯಾಗಿಸುವ ಪ್ರಯತ್ನದಲ್ಲಿ ನಿರತವಾಗಿತ್ತು. ಸೈನ್ಯದಲ್ಲಿ ಉದ್ಯೋಗಿಯಾಗಿದ್ದ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತರನ್ನು 2008ರ ನವೆಂಬರ್​ನಲ್ಲಿ ಈ ಕೇಸಿನಲ್ಲಿ ಬಂಧಿಸಲಾಯ್ತು. ಅವರನ್ನು ಹಿಂದೂ ರಾಷ್ಟ್ರೀಯವಾದಿ ಗುಂಪಿಗೆ ಸೇರಿದ ಅಭಿನವ ಭಾರತದ ಸದಸ್ಯನೆಂದು ಗುರುತಿಸ ಲಾಯ್ತು. ಅವರೇ ಇದರ ಸೂತ್ರಧಾರನೆಂದು ಬಿಂಬಿಸಲು ಬೇಕಾದಷ್ಟು ತಯಾರಿಯನ್ನೂ ಮಾಡಿ ಕೊಳ್ಳಲಾಯ್ತು. ನಂತರ ಸಿಕ್ಕ ಮಾಹಿತಿಯ ಪ್ರಕಾರ, ಸರ್ಕಾರ ಈ ರೀತಿಯ ತೀಕ್ಷ್ಣ ಆರೋಪಗಳನ್ನು ಮಾಡುತ್ತಿರುವಾಗ ಸೇನೆಯ ಗೂಢಚರ್ಯು ವಿಭಾಗವೇ ಕರ್ನಲ್ ಪುರೋಹಿತರನ್ನು ಒಂದಷ್ಟು ಸೂಕ್ಷ್ಮ ಮಾಹಿತಿಯ ಸಂಗ್ರಹಕ್ಕಾಗಿಯೇ ನೇಮಿಸಿತ್ತು ಎಂಬುದು ಬೆಳಕಿಗೆ ಬಂತು. ಸೈನ್ಯವೂ ಗೃಹಸಚಿವರಿಗೆ ಅಧಿಕೃತವಾಗಿ ಪತ್ರ ಬರೆದು ಪುರೋಹಿತರು ಯಾವ ಕಾರಣ ಕ್ಕಾಗಿ ನೇಮಕಗೊಳಿಸಲ್ಪಟ್ಟಿದ್ದರು ಎಂಬುದನ್ನು ವಿವರಿಸಿತು. ಆದರೆ ಕಾಂಗ್ರೆಸ್ಸಿನ ಮನ ಕರಗಲಿಲ್ಲ. ಕರ್ನಲ್ ಪುರೋಹಿತರನ್ನು ಮನಸೋ ಇಚ್ಛೆ ಥಳಿಸಲಾಯ್ತು. ಯಾತನಾಮಯ ಬದುಕಿಗೆ ಅವರನ್ನು ದೂಡಲಾಯ್ತು. ಕತ್ತಲಕೋಣೆಯಲ್ಲಿ ಕೊಳೆಯುವಂತೆ ಮಾಡಲಾಯ್ತು. ಟ್ಯಾಂಕ ರುಗಳಂತೆ ಇದ್ದ ಸೆಲ್​ಗಳಲ್ಲಿ ಅವರನ್ನು ಕೂಡಿಹಾಕಲಾಯ್ತು. ಅಷ್ಟಾದರೂ ಅವರಿಂದ ಒಂದೇ ಒಂದು ಮಾಹಿತಿಯನ್ನು ಹೊರಗೆಳೆಯಲಾಗಲಿಲ್ಲ. ಆದರೆ ಸರ್ಕಾರ ಹಠಕ್ಕೆ ಬಿದ್ದಿತ್ತು.

ವಾಸ್ತವ ನಿರ್ಲಕ್ಷಿಸಿದ ಸರ್ಕಾರ: ಆ ಹೊತ್ತಿಗೆ ಅಮೆರಿಕದ ಗೂಢಚರ್ಯು ಇಲಾಖೆ ಲಷ್ಕರ್-ಎ-ತಯ್ಬಾ ಮತ್ತು ಜೈಷ್-ಎ-ಮೊಹಮ್ಮದ್ ಸಂಘಟನೆಗಳು ಈ ಘಟನೆಗೆ ಕಾರಣವೆಂಬ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದಲ್ಲದೆ ಭಾರತ ಈ ಕುರಿತಂತೆ ಯಾವ ನಿರ್ಣಯವನ್ನೂ ಕೈಗೊಳ್ಳದೆ ಹೋದಾಗ 2009ರಲ್ಲಿ ಇದರ ಸೂತ್ರಧಾರನಾದ ಆರೀಫ್ ಕಸ್ಮಾನಿಗೆ ಅಮೆರಿಕ ನಿರ್ಬಂಧ ಹೇರಿತು. ಅಮೆರಿಕದ ಗೂಢಚರ್ಯ ಇಲಾಖೆಯ ಪ್ರಕಾರ ಆತನೇ ಈ ಇಡಿಯ ಬಾಂಬ್​ದಾಳಿಯ ಸೂತ್ರಧಾರಿಯಾಗಿದ್ದ!

ಒಟ್ಟಾರೆ ಪ್ರಕರಣ ಪಾಕಿಸ್ತಾನ ಮತ್ತು ಭಾರತದ ಬಾಂಧವ್ಯವನ್ನು ಕೆಡಿಸುವ ದೃಷ್ಟಿಕೋನವನ್ನು ಮೇಲ್ನೋಟಕ್ಕೆ ಹೊಂದಿದ್ದರೆ ಆಂತರ್ಯದಲ್ಲಿ ಇದಕ್ಕೆ ‘ಹಿಂದೂಗಳೇ ಕಾರಣ’ ರೆಂದು ಬಿಂಬಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಜನರ ಕಣ್ಣಿನಲ್ಲಿ ದೋಷಿಯಾಗಿಸಬೇಕೆಂಬ ಪ್ರಯತ್ನವೂ ಇತ್ತು. ಬಳಿಕ ಪ್ರಕಟಗೊಂಡ ವಿಕಿಲೀಕ್ಸ್​ನ ಮಾಹಿತಿ ನಂಬುವುದಾದರೆ ಹಿಂದೂಗಳನ್ನು ಭಯೋತ್ಪಾದಕರೆಂದು ಕರೆಯುವ ಈ ಪ್ರಯತ್ನ ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಸಾಕಷ್ಟು ಕಡಿಮೆ ಮಾಡಿತ್ತು. ಕರ್ನಲ್ ಶ್ರೀಕಾಂತ್ ಪುರೋಹಿತರ ಕುರಿತು ಸೇನೆಯ ವಿಚಾರಣೆ ನಡೆದಾಗ 59ಕ್ಕೂ ಹೆಚ್ಚು ಸಾಕ್ಷಿಗಳು ಪುರೋಹಿತ್ ಪರವಾಗಿ ಸಾಕ್ಷಿ ನುಡಿದಿದ್ದು ಕಾಂಗ್ರೆಸ್ಸಿನ ಒಟ್ಟಾರೆ ಪ್ರಯತ್ನಕ್ಕೆ ತಣ್ಣೀರೆರಚಿತ್ತು. ಇವರ ಪಾತ್ರವನ್ನು ಪ್ರಮಾಣೀಕ ರಿಸಲು ಅವರೀಗ ಮತ್ತೊಬ್ಬ ಸಮರ್ಥ ವ್ಯಕ್ತಿಯನ್ನು ಹುಡುಕಾ ಡುತ್ತಿದ್ದರು. ಅದು ಸ್ವಾಮಿ ಅಸೀಮಾನಂದರ ರೂಪದಲ್ಲಿ ಸಿಕ್ಕಿತು. 2010ರ ಡಿಸೆಂಬರ್​ನಲ್ಲಿ ಸ್ವಾಮಿ ಅಸೀಮಾನಂದರನ್ನು ‘ಪೂರ್ಣ ಸಾಕ್ಷಿಯಿದೆ’ ಎನ್ನುತ್ತಾ ಬಂಧಿಸಿದ ರಾಷ್ಟ್ರೀಯ ತನಿಖಾ ದಳ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿತು. ಗುಜರಾತಿ ನಲ್ಲಿ ಮಿಷನರಿಗಳ ಮೂಲಕ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡಿದ್ದ ಬುಡಕಟ್ಟು ಜನಾಂಗ ದವರನ್ನು ಮರಳಿ ಮಾತೃಧರ್ಮಕ್ಕೆ ಕರೆತಂದಿದ್ದ ಸ್ವಾಮೀಜಿ ವಿರುದ್ಧ ಸಹಜವಾಗಿಯೇ ಕೋಪ ವಿತ್ತು. ಅದನ್ನು ತೀರಿಸಿಕೊಳ್ಳಲು ಇದು ಸದವ ಕಾಶ! ಹಾಗೆಯೇ ಕರ್ನಲ್ ಪುರೋಹಿತ ರಿಗೆ ಮಾರ್ಗದರ್ಶನ ಮಾಡಿ ಪ್ರೇರೇಪಣೆ ಕೊಟ್ಟಿದ್ದು ಇವರೇ ಎಂದು ಹೇಳುವ ಮೂಲಕ ಮುಸಲ್ಮಾ ನರಿಗೆ ಭಯೋತ್ಪಾದನೆಗೆ ಧರ್ಮ ಪ್ರೇರಣೆ ಎನ್ನುವುದಾದರೆ ಹಿಂದೂಗಳಿಗೆ ಕಾವಿಧಾರಿಗಳು ಪ್ರೇರಣೆಯಾಗುತ್ತಾರೆ ಎಂಬುದನ್ನು ಸಾಬೀತುಪಡಿಸಲು ಕಾಂಗ್ರೆಸ್ಸು ಹವಣಿಸುತ್ತಿತ್ತು.

ಅಸೀಮಾನಂದರಿಗೆ ನಾವ್ಯಾರೂ ಊಹಿಸಲಾಗದಷ್ಟು ಕಿರುಕುಳ ನೀಡಲಾಯ್ತು. ಆಗಿನ ದಿನಗಳಲ್ಲಿ ಅವರು ನ್ಯಾಯಾಲಯದಲ್ಲಿ ತಮಗೆ ನೀಡಿದ ಕಿರುಕುಳಗಳನ್ನು ಹೇಳಿಕೊಳ್ಳುವಾಗ ಎಂಥವರ ಕಣ್ಣಲ್ಲೂ ನೀರು ಬರುತ್ತಿತ್ತು. ಈ ಎಲ್ಲ ಕಿರುಕುಳಗಳ ಪರಿಣಾಮವಾಗಿಯೇ ಅವರು ಪೊಲೀಸರು ಹೇಳಿದ ಹೆಸರುಗಳನ್ನು ತಮ್ಮೊಂದಿಗೆ ಸ್ಪೋಟಕ್ಕೆ ಸಹಕರಿಸಿದವರು ಎಂದು ಅನಿವಾರ್ಯವಾಗಿ ಒಪ್ಪಿಕೊಂಡರು. ತನಿಖಾ ದಳ ಈ ಹೆಸರುಗಳ ಮೂಲಕ ನೇರವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನೇ ಸಿಲುಕಿಸುವ ಪ್ರಯತ್ನ ನಡೆಸುತ್ತಿತ್ತು. ಅವರ ಕಣ್ಣು ನೆಟ್ಟಿದ್ದುದು ಸಂಘದ ಪ್ರಚಾರಕರಾದ ಇಂದ್ರೇಶ್​ಕುಮಾರ್ ಮೇಲೆ! ಆದರೆ ದೇಶದಾದ್ಯಂತ ಇದರ ವಿರುದ್ಧ ನಡೆದ ಪ್ರತಿಭಟನೆಯಿಂದಾಗಿ ಗಾಬರಿಗೊಂಡ ಕಾಂಗ್ರೆಸ್ಸು ಈ ಯೋಜನೆಯನ್ನು ಕೈಬಿಡಬೇಕಾಗಿ ಬಂತು. ಅಷ್ಟೇ ಅಲ್ಲ, ಕರ್ನಲ್ ಪುರೋಹಿತ್ ಮತ್ತು ಸ್ವಾಮಿ ಅಸೀಮಾನಂದರ ವಿರುದ್ಧ ಕಾಂಗ್ರೆಸ್ಸು ಹೇಳಲು ಪ್ರಯತ್ನಿಸುತ್ತಿದ್ದ ಯಾವ ಸುಳ್ಳುಗಳನ್ನೂ ಭಾರತ ಒಪ್ಪಲು ಸಿದ್ಧವಿರಲಿಲ್ಲ. ಇದು ಈ ಷಡ್ಯಂತ್ರಕ್ಕೆ ಹಿನ್ನಡೆ ಉಂಟುಮಾಡಿತ್ತು.

ಆಗಲೇ ಪದೇಪದೆ ‘ಹಿಂದೂ ಭಯೋತ್ಪಾದನೆ’ ಎನ್ನುವ ಪದವನ್ನು ಕಾಂಗ್ರೆಸ್ಸಿಗರು ಬಳಸಿ ಅದನ್ನು ಜನಮಾನಸದಲ್ಲಿ ಉಳಿಸುವ ಪ್ರಯತ್ನ ಮಾಡುತ್ತಿದ್ದರು. ಸಂಝೆೊತಾ ಪ್ರಕರಣದ ಒಂದು ವರ್ಷದೊಳಗೇ ಮಾಲೆಂಗಾವ್​ನಲ್ಲಿ ನಡೆದ ಮತ್ತೊಂದು ಬಾಂಬ್ ಸ್ಫೋಟ ಕಾಂಗ್ರೆಸ್ಸಿನ ಈ ಕಲ್ಪನೆಗಳಿಗೆ ನೀರೆರೆದಿತ್ತು. ಈ ಪ್ರಕರಣ ಮತ್ತು ಹಿಂದೂ ಭಯೋತ್ಪಾದನೆ ಷಡ್ಯಂತ್ರದ ಕುರಿತು ಮತ್ತಷ್ಟು ವಿವರಗಳನ್ನು ಮುಂದೆ ನೋಡೋಣ.

(ಲೇಖಕರು ಖ್ಯಾತ ವಾಗ್ಮಿ, ಚಿಂತಕರು)

- Advertisement -

Stay connected

278,541FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....