ಚಾಯ್​ವಾಲಿ ಲೈಫು ಜಾಲಿ!

blank

| ಸಮನ್ವಿತಾ ಎಂ.

ಒಂದು ಕಾಲದ ಚಾಯ್ವಾಲಾ ಪ್ರಧಾನಿ ಹುದ್ದೆಗೇರಿದ್ದು ಭಾರತದ ಇತಿಹಾಸ. ಮುಂಬೈನ ಬೀದಿ ಬದಿಯ ಸ್ಟೈಲಿಶ್ ಚಾಯ್ವಾಲಾ ಡಾಲಿ ಬಳಿಯೇ ತೆರಳಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್​ಗೇಟ್ಸ್ ಟೀ ಕುಡಿದು ಫೋಟೋ ತೆಗೆಸಿಕೊಂಡಿದ್ದು ಚಹಾಗಿರುವ ಬಣ್ಣ, ರುಚಿ, ಶಕ್ತಿಯ ದ್ಯೋತಕ. ಇದೇ ಚಹಾ ಭಾರತದಲ್ಲಿ ಲಕ್ಷಾಂತರ ಜನರ ಕೈಹಿಡಿದಿದೆ. ಪುರುಷರಷ್ಟೇ ಅಲ್ಲ, ಪದವೀಧರ ಯುವತಿಯರ ಬದುಕಿಗೆ ದಾರಿ ಆಗಿದೆ. ದೇಶದಲ್ಲಿ ಸದ್ದು ಮಾಡುತ್ತಿರುವ ಚಾಯ್ವಾಲಿಗಳ ಬದುಕಿನ ಕಥೆಯನ್ನು ಒಮ್ಮೆ ಆಸ್ವಾದಿಸೋಣ ಬನ್ನಿ…

blank

ಫಲಿಸಿದ ಪೂಜಾ ಫಲ

25 ವರ್ಷದ ಲಖನೌ ಪದವೀಧರೆ ಪೂಜಾ ಯಾದವ್ ಅವರದು ಮತ್ತೊಂದು ವಿಭಿನ್ನ ಕತೆ. ಕಷ್ಟಪಟ್ಟು ಐಟಿಯಲ್ಲಿ ಉದ್ಯೋಗ ಪಡೆದಿದ್ದ ಈಕೆ ಆರ್ಥಿಕ ಹಿಂಜರಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದಳು. ಮೂರು ತಿಂಗಳಿಂದ ಈಕೆಗೆ ವೇತನವೇ ಸಿಗಲಿಲ್ಲ. ಖಾಲಿ ಕೈಗಳಲ್ಲಿಮಾಡುವುದೇನೆಂಬ ಚಿಂತೆಕಾಡಿತು. ಹಾಗಂತ ಕೈಕಟ್ಟಿ ಕೂರಲಿಲ್ಲ. ಸ್ಟಾರ್ಟಪ್ ಐಡಿಯಾ ಹೊಳೆದ ತಕ್ಷಣವೇ ಒಂದು ಚಹಾ ಅಂಗಡಿ ತೆರೆದಳು. ಅದಕ್ಕೆ ‘ಉದ್ಯೋಗವಿಲ್ಲದ ಚಾಯ್ವಾಲಿ’ ಎಂದು ಹೆಸರಿಟ್ಟಳು. ಮೊದಲ ಆರು ತಿಂಗಳು ತನ್ನ ಟೀ ಅಂಗಡಿಯ ಗುಟ್ಟನ್ನು ಈಕೆ ಕುಟುಂಬಸ್ಥರಿಗೂ ತಿಳಿಸಿರಲಿಲ್ಲ. ಟೀ ಅಂಗಡಿಯಲ್ಲೇ ಬದುಕು ರೂಪಿಸಿಕೊಂಡ ಈಕೆ ಈಗ ಮತ್ತೆ ಮೂವರು ಮಹಿಳೆಯರನ್ನು ಕೆಲಸಕ್ಕಿಟ್ಟುಕೊಂಡಿದ್ದಾಳೆ. ಯಾರೋ ಕೈಕೆಳಗೆ ಬಿಟ್ಟಿ ಕೆಲಸ ಮಾಡುವುದಕ್ಕಿಂತ ಟೀ ಅಂಗಡಿಯಲ್ಲೇ ನೆಮ್ಮದಿ ಇದೆ ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. 15 ಸಾವಿರ ಸಂಬಳಕ್ಕೆ ಐಟಿಯಲ್ಲಿ ಕೆಲಸಕ್ಕೆ ಸೇರಿದ್ದ ಈಕೆ ತನ್ನ ಪ್ರತಿ ನೌಕರರಿಗೆ ತಿಂಗಳಿಗೆ 15 ಸಾವಿರ ರೂ. ನೀಡುತ್ತಿದ್ದಾಳೆ.

ಚಹಾ ಭಾರತ ನಂಟು

ಬ್ರಿಟಿಷರಿಂದ ಭಾರತಕ್ಕೆ ಬಂದ ಚಹಾ. ಭಾರತದಲ್ಲಿ ವಸಾಹತು ಸ್ಥಾಪನೆ ಕಾಲ. ಚಹಾ ಗುಟ್ಟು ತಿಳಿಸಿದ ಚೀನಿಯರ ಪರಿಚಯ. ಆದರೆ ಚಹಾ ತಯಾರಿ ಕಲಿಸಲೊಪ್ಪದ ಚೀನಿಯರು ಚೀನಾಗೆ ಅಫೀಮು ಸಾಗಾಟ ಆರಂಭಿಸಿದ ಬ್ರಿಟನ್ಫೀ ಅಫೀಮು ಸಾಗಣೆಗೆ ಬಂಗಾಳದ ನೆಲೆ ಬಳಕೆ. ಬಳಿಕ ಚೀನಾ-ಬ್ರಿಟನ್ ನಡುವೆ ಮನಸ್ತಾಪ ಚೀನಾ ವಿರುದ್ಧ ಯುದ್ಧ ನಡೆಸಿ ಗೆದ್ದ ಬ್ರಿಟನ್ ಚಹಾ, ಅಫೀಮಿಗಾಗಿ ವ್ಯಾಪಾರ ಮಾರ್ಗ ಮುಕ್ತ. ಬಳಿಕ ಚಹಾವನ್ನು ಭಾರತದಲ್ಲಿ ನೆಟ್ಟ ಬ್ರಿಟಿಷರು.

ಬೀದೀಲಿ ಮಾಡೆಲ್ ಮೋಡಿ

ಉತ್ತರ ಪ್ರದೇಶದ ಈಕೆ ಹೆಸರು ಸಿಮ್ರಾನ್ ಗುಪ್ತಾ. 2018ರಲ್ಲಿ ಮಿಸ್ ಗೋರಖ್​ಪುರ್ ಕಿರೀಟ ಮುಡಿಗೇರಿಸಿಕೊಂಡ ಈಕೆಗೆ ಸದಾ ಹೊಸತನ್ನು ಸಾಧಿಸುವ ತವಕ. ಇದಕ್ಕಾಗಿಯೇ ಲಖನೌದಲ್ಲಿ ಟೀ ಸ್ಟಾಲ್ ತೆರೆದಳು. ಟೀ ಮಾರಾಟವನ್ನು ಟ್ರೆಂಡಿ ವ್ಯಾಪಾರವನ್ನಾಗಿ ಪರಿವರ್ತಿಸಿದ ಸಾಧಕರಲ್ಲಿ ಈಕೆ ಒಬ್ಬಳು. ಕೋವಿಡ್ ಅವಧಿಯಲ್ಲಿ ಎಲ್ಲ ಉದ್ಯಮದಂತೆ ಮಾಡೆಲಿಂಗ್​ಗೂ ಗರ ಬಡಿದಿತ್ತು. ಸುಮ್ಮನೆ ಕುಳಿತರಾಗದೆಂಬ ನಿರ್ಧಾರಕ್ಕೆ ಬಂದ ಈಕೆ ರಸ್ತೆ ಬದಿಯಲ್ಲಿ ವಿಭಿನ್ನ ರೀತಿಯ ಸಣ್ಣ ಚಹಾ ಅಂಗಡಿ ತೆರೆದಳು. ಗುಲಾಬಿ ಬಣ್ಣದ ಟಾಪ್, ಪ್ಯಾಂಟ್ ಧರಿಸಿ, ಉದ್ದ ಕೂದಲನ್ನು ಬಿಟ್ಟು ರಸ್ತೆಯಲ್ಲೇ ಸ್ಟೌ ಹಚ್ಚಿದಳು. ಮೊದಮೊದಲು ಪ್ರಚಾರಕ್ಕೆ ಈ ನಾಟಕ ಮಾಡುತ್ತಿದ್ದಾಳೆಂದು ಹಂಗಿಸಿದವರು ಬಳಿಕ ಆಕೆಯ ಅಂಗಡಿಯ ಖಾಯಂ ಗ್ರಾಹಕರಾದರು. ಇನ್​ಸ್ಟಾದಲ್ಲಿ ಈಕೆಯ ವಿಡಿಯೋ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಲೈಕ್ ಪಡೆದಿದೆ. ಚಹಾದಿಂದಲೇ ಬದುಕು ಕಟ್ಟಿಕೊಂಡ ಈಕೆ ಲಖನೌದ ಸಾವಿರಾರು ಯುವತಿಯರಿಗೆ ಆದರ್ಶವಾಗಿದ್ದಾಳೆ.

ಅರ್ಥಶಾಸ್ತ್ರಜ್ಞೆಗೆ ಹೊಸ ಬದುಕು

ಚಂಡೀಗಢದ ಪ್ರಿಯಾಂಕಾ ಗುಪ್ತಾ ಅರ್ಥಶಾಸ್ತ್ರ ಪದವೀಧರೆ. ಈಕೆ ಕೂಡ ಉನ್ನತ ಹುದ್ದೆಯ ಕನಸು ಕಂಡು ನಿರಾಸೆೆ ಅನುಭವಿಸಿದ್ದಳು. ಸರ್ಕಾರಿ ಉದ್ಯೋಗ ಪಡೆಯುವುದು ಈಕೆಯ ಕನಸಾಗಿತ್ತು. ಅರ್ಜಿ ಹಾಕಿ ವರ್ಷಾನುಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಚಪ್ಪಲಿ ಸವೆಸಿದ ಬಳಿಕ ಪ್ರಿಯಾಂಕಾಗೆ ಬಿಜಿನೆಸ್ ಆಲೋಚನೆ ಹೊಳೆಯಿತು. ತಡಮಾಡದ ಈಕೆ ಪಟನಾ ಮಹಿಳಾ ಕಾಲೇಜಿನ ಹೊರಗೆ ಟೀ ಸ್ಟಾಲ್ ತೆರೆದೇ ಬಿಟ್ಟರು. ಎಂಬಿಎ ಮಾಡಿರುವ ಈಕೆ ಸರ್ಕಾರಿ ಕಚೇರಿಯಲ್ಲಿ ಲೆಕ್ಕಪತ್ರ ಪರಿಶೀಲಿಸುವ ಉದ್ಯೋಗದ ನಿರೀಕ್ಷೆಯಲ್ಲಿದ್ದಳು. ಆದರೆ ಆತ್ಮನಿರ್ಭರ್​ನ ಪ್ರಯತ್ನ ಈಕೆಯ ಕೈಹಿಡಿದಿದೆ. ನಿರೀಕ್ಷೆಗೂ ಮೀರಿ ಈಕೆಯ ಉದ್ಯಮ ಯಶಸ್ಸು ಕಂಡಿದೆ. ಮಾರ್ಕೆಂಟಿಂಗ್ ತಂತ್ರಗಾರಿಕೆ ಕಂಡುಕೊಂಡಿರುವ ಈಕೆ ತನ್ನ ಉದ್ಯಮವನ್ನು ಇನ್ನಷ್ಟು ಬೆಳೆಸುವ ಕನಸು ಕಂಡಿದ್ದಾಳೆ. ತನ್ನ ಈ ಪ್ರಯತ್ನ ಇತರ ಯುವತಿಯರಿಗೂ ಪ್ರೇರಣೆ ಆಗಲಿ ಎಂದು ಆಶಿಸಿದ್ದಾಳೆ.

ಚಹಾದಿಂದ ಜಗಗೆದ್ದ!

ಸುನೀಲ್ ಪಾಟೀಲ್ ಅಲಿಯಾಸ್ ಡಾಲಿ ಚಾಯ್ವಾಲಾ. ಈತ ವಿಶ್ವಕ್ಕೇ ಈಗ ಚಿರಪರಿಚಿತ. ಮಹಾರಾಷ್ಟ್ರದ ನಾಗ್ಪುರದಗಲ್ಲಿಯಲ್ಲಿ ಈತ ಮಾರುವ ಟೀಗೆ ಸಾವಿರಾರು ಅಭಿಮಾನಿಗಳಿದ್ದಾರೆ. ಹಾವಿನಂತೆ ನಾಲಿಗೆ ಹೊರಚಾಚಿ, ಹಾಲಿನ ಪ್ಯಾಕೇಟನ್ನು ತಲೆ ಮೇಲಿಟ್ಟು ಪಾತ್ರೆಗೆ ಸುರಿಯುವ ಈತನ ಸ್ಟೈಲ್ ನೋಡೋದಕ್ಕಾಗಿಯೇ ಸಾವಿರಾರು ಜನರು ಬರುತ್ತಾರೆ. ವಿಶ್ವದ ಅತ್ಯಂತ ಸ್ಟೈಲಿಶ್ ಟೀ ಮಾರಾಟಗಾರನೆಂಬ ಖ್ಯಾತಿ ಪಡೆದಿರುವ ಈತನನ್ನ ಇತ್ತೀಚೆಗಷ್ಟೇ ಉದ್ಯಮ ದಿಗ್ಗಜ ಬಿಲ್​ಗೇಟ್ಸ್ ಭೇಟಿ ಆಗಿದ್ದರು. ಈತನ ಅಂಗಡಿ ಬಳಿಯೇ ತೆರಳಿ ಒಂದು ಗ್ಲಾಸ್ ಟೀ ಕುಡಿದಿದ್ದರು. ಇದಾದ ಬಳಿಕ ಡಾಲಿ ಇನ್​ಸ್ಟಾ ಫಾಲೋ ವರ್ಸ್ ಸಂಖ್ಯೆ 30 ಲಕ್ಷ ದಾಟಿದೆ. ಈತನ ಅಂಗಡಿ ಮೌಲ್ಯ 10 ಲಕ್ಷ ರೂ. ದಾಟಿದೆ. ಇದು ಭಾರತದ ಚಹಾಗಿರುವ ಶಕ್ತಿ.

ಚಹಾದ ಸ್ವಾರಸ್ಯ

ಚಹಾ ಬ್ರಿಟಿಷ್, ಚೀನಿ ಸಂಸ್ಕೃತಿ ಭಾಗ

2000 ವರ್ಷಗಳ ಹಿಂದೆ ಚಹಾ ಬಳಕೆ

ಚೀನಿಯರಿಗುಂಟು ಶತಮಾನದ ನಂಟು

ಎಷ್ಟು ಬಗೆ ಚಹಾ ಇದೆ?

ಮಸಾಲಾ ಚಾಯ್, ಹಸಿರು ಚಾಯ್, ಬೆಣ್ಣೆ ಚಾಯ್, ಕಾಶ್ಮೀರಿ ಕಹ್ವಾ, ಇರಾನಿ ಚಾಯ್, ನೀಲಗಿರಿ ಚಾಯ್, ಡಾರ್ಜಿಲಿಂಗ್ ಚಾಯ್. ಇನ್ನೂ ಬಹಳಷ್ಟು ಬಗೆ ಇವೆ.

ಚಹಾ ಬಂಡವಾಳ!

  • 10/10 ಸ್ಥಳ ಇದ್ದರೂ ಸಾಕು
  • ಅಂಗಡಿ ಅಲಂಕಾರಕ್ಕೆ 2 ಲಕ್ಷ ರೂ.ಬೇಕು
  • ಮುಂಗಡ ಸೇರಿ 5 ಲಕ್ಷ ರೂಪಾಯಿ ಅಗತ್ಯ
  • ದಿನ 300-500 ಕಪ್ ಟೀ ಮಾರಬಹುದು
  • ಗ್ಲಾಸ್​ಗೆ 12-15 ರೂ.ನಂತೆ 3600 ರೂ.ಗಳಿಕೆ
  • ಬಂಡವಾಳ, ಬಾಡಿಗೆ ಬಿಟ್ಟು 2 ಸಾವಿರ ರೂ.ಫಿಕ್ಸ್
  • ಕೆಲಸದವರಿಗಾಗಿ ಹುಡುಕುವ ಅಗತ್ಯವಿಲ್ಲ
  • ಹೆಚ್ಚಿನ ಪ್ರಮಾಣದ ನೀರು ವ್ಯಯವಾಗಲ್ಲ
  • ಸಣ್ಣ ಅಂಗಡಿ ಆದರೆ ಬಾಡಿಗೆ ಹೊರೆಯಿಲ್ಲ
  • ಪ್ರತಿನಿತ್ಯ ಅಂಗಡಿ ಸ್ವಚ್ಛತೆ ಕಾರ್ಯ ಸುಲಭ
  • ಬೆಳಗ್ಗೆಯಿಂದ ರಾತ್ರಿವರೆಗೆ ಗ್ರಾಹಕರು ಲಭ್ಯ
  • ಗ್ರಾಹಕರಿಗೆ ದೊಡ್ಡ ರ್ಪಾಂಗ್ ಸ್ಥಳ ಬೇಕಿಲ್ಲ

ಈ 9 ಆಹಾರಗಳನ್ನು ತಿಂದರೆ HMPV ವೈರಸ್​ನಿಂದ ದೂರ ಉಳಿಯಬಹುದು! ಇಲ್ಲಿದೆ ಉಪಯುಕ್ತ ಮಾಹಿತಿ…

Share This Article

ಕೂದಲು ಉದುರುವಿಕೆ ಕಡಿಮೆ ಮಾಡಲು ಹೀಗೆ ಮಾಡಿ.. ಫಲಿತಾಂಶ ಗ್ಯಾರಂಟಿ! hair care

hair care: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಅನೇಕ ಜನರು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ.…

ಒಣಗಿದ ಮಾವು, ಪೇರಲ ಮತ್ತು ಹಲಸಿನ ಎಲೆಗಳಿಗೆ ಹೆಚ್ಚಿದ ಬೇಡಿಕೆ! ಒಂದು ಪ್ಯಾಕೆಟ್ ಬೆಲೆ 500 ರೂ. dried mango leaves

dried mango leaves : ಹಿಂದೂ ಧರ್ಮದಲ್ಲಿ ಮಾವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಶುಭ ಸಮಾರಂಭಗಳು…

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…