More

  ಏ. 27ಕ್ಕೆ ಚೈತ್ರ ಸಂಗೀತೋತ್ಸವ; ಮುರಲಿ ಮೋಹನ್ ಕಲ್ವಕಲ್ವ ಅವರಿಗೆ ಪ್ರಶಸ್ತಿ

  ಬೆಂಗಳೂರು: ಸತೀಶ್ ಹಂಪಿಹೊಳಿ ಮ್ಯೂಜಿಕ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಏ.27ಕ್ಕೆ ಚೈತ್ರ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ಶಿವರಾತ್ರೀಶ್ವರ ಕೇಂದ್ರದ ಜೆ.ಎಸ್.ಎಸ್.ಸಭಾಂಗಣದಲ್ಲಿ ಮಧ್ಯಾಹ್ನ 3ಕ್ಕೆ ಕಾರ್ಯಕ್ರಮಕ್ಕೆ ನಡೆಯಲಿದ್ದು, ಸಂಜೆ 6ಕ್ಕೆ ಪಂಡಿತ್ ಬಸವರಾಜ್ ಬೆಂಡಿಗೇರಿ ಅವರ ಸ್ಮರಣಾರ್ಹ ಗುರು ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

  ಕತಕ್ ನೃತ್ಯ ಕಲಾವಿದ ಮುರಲಿ ಮೋಹನ್ ಕಲ್ವಕಲ್ವ ಅವರನ್ನು 2024ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು 25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಫಲತಾಂಬೂಲ ಒಳಗೊಂಡಿದೆ.

  ಕಾರ್ಯಕ್ರಮವನ್ನು ಮನೋವೈದ್ಯ ಪದ್ಮಶ್ರೀ ಡಾ॥ ಸಿ ಆರ್ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕಲಾವಿದ ಡಾ. ಶ್ರೀಧರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾಂತಿ ಸ್ವೀಟ್ಸ್ ಸಂಸ್ಥಾಪಕರಾದ ಉಷಾದೇವಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಿಂದೂಸ್ತಾನಿ ಗಾಯಕರಾದ ಪಂಡಿತ್ ಮೃತ್ಯುಂಜಯ ಶೆಟರ್ ಯುಟ್ಯೂಬ್ ಚಾನಲ್ ಬಿಡುಗಡೆ ಮಾಡಲಿದ್ದಾರೆ.

  ಕಾರ್ಯಕ್ರಮದಲ್ಲಿ ಮುರಲಿ ಮೋಹನ್ ಕಲ್ವಕಲ್ವ ಅವರು ಕಥಕ್ ನೃತ್ಯ ಪ್ರದರ್ಶನ ನೀಡಲಿದ್ದಾರೆ. ನಂತರ ನಡೆಯುವ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದರಾದ ಶಿವಾನಂದ ಸಾಲಿಮಠ, ಸತೀಶ್ ಹಂಪಿಹೊಳಿ, ವಿಜಯಕುಮಾರ್, ಶಿವಕುಮಾರ್ ಮಹಾಂತ್, ಅಮೃತೇಶ್ ಕುಲಕರ್ಣಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts