ಆರ್‌ಟಿಇ ಶುಲ್ಕ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

ಚಡಚಣ: 2018-19ನೇ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಆರ್‌ಟಿಇ ಅಡಿ ದಾಖಲಾದ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ಇದುವರೆಗೂ ಪಾವತಿಸದ ಕಾರಣ ಚಡಚಣ ಶೈಕ್ಷಣಿಕ ವಲಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸ್ಥಳೀಯ ಬಿಇಒ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಬಿಇಒ ಮಹಾವೀರ ಮಾಲೇಗಾಂವ್ ಅವರಿಗೆ ಮನವಿ ಸಲ್ಲಿಸಿದರು.
ಖಾಸಗಿ ಅನುದಾನ ರಹಿತ ಪ್ರಾಥಮಿಕ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶಂಕರ ಹಾವಿನಾಳ ಮಾತನಾಡಿ, ಸರ್ಕಾರ ಭರಿಸಬೇಕಾದ ಆರ್‌ಟಿಇ ವಿದ್ಯಾರ್ಥಿಗಳ ಶುಲ್ಕವನ್ನು ಈವರೆಗೂ ಮರುಪಾವತಿಸಿಲ್ಲ. ಹೀಗಾಗಿ ಖಾಸಗಿ ಶಾಲೆಗಳಿಗೆ ಖರ್ಚು- ವೆಚ್ಚ ಭರಿಸಲು ತೊಂದರೆಯಾಗಿದೆ. ಒಂದು ವಾರದೊಳಗಾಗಿ ಸರ್ಕಾರ ಬಾಕಿ ಹಣವನ್ನು ಶಾಲೆಗಳ ಖಾತೆಗೆ ಜಮೆ ಮಾಡಬೇಕು. ಖಾಸಗಿ ಶಾಲೆಗಳ ಪ್ರಸಕ್ತ ಬೇಡಿಕೆಯನುಸಾರ ಪಠ್ಯ ಪುಸ್ತಕಗಳನ್ನು ವಿತರಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚಡಚಣ ವಲಯದ ಎಲ್ಲ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *