ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಸಿಇಟಿ ಪರೀಕ್ಷೆಯ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.18ರಂದು ನಡೆಸಲು ನಿಗದಿಯಾಗಿದ್ದ ಕನ್ನಡ ಭಾಷಾ ಪರೀಕ್ಷೆಯ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ.
ಪರೀಕ್ಷೆಯನ್ನು ಏ.18ರಂದು ನಡೆಸಲು ಉದ್ದೇಶಿಸಲಾಗಿತ್ತು. ಅಂದು ಗುಡ್ ್ರೈಡೇ ಆಗಿರುವುದರಿಂದ ಕೆಲವು ಅಭ್ಯರ್ಥಿಗಳು ದಿನಾಂಕವನ್ನು ಬದಲಾಯಿಸಲು ಕೋರಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಕನ್ನಡ ಭಾಷೆ ಪರೀಕ್ಷೆಯನ್ನು ಏ.15ರಂದು ನಡೆಸಲು ನಿರ್ಧರಿಸಲಾಗಿದೆ.
ಈಗಾಗಲೇ ನಿಗದಿಪಡಿಸಿ ಪ್ರಕಟಿಸಿರುವಂತೆ ಸಿಇಟಿ-2025ರ ಪರೀಕ್ಷೆಗಳು ಏ.16 ಮತ್ತು 17ರಂದು ನಿಗದಿಯಂತೆ ನಡೆಯಲಿವೆ. ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಏ.15ರಂದು ಬೆಳಗ್ಗೆ 10.30ರಿಂದ 11.30ರವರೆಗೆ 4ನೇ ತರಗತಿಯ ಮಟ್ಟದಲ್ಲಿ ಕನ್ನಡ ಪರೀಕ್ಷೆಯನ್ನು 50 ಅಂಕಗಳಿಗೆ ನಡೆಸಲಾಗುತ್ತದೆ.