ಶ್ರೀರಂಗಪಟ್ಟಣ: ಕ್ಷೇತ್ರದ ಜನರಿಗೆ ಗುಣಮಟ್ಟದ ಹಾಗೂ ಸಮರ್ಪಕ ವಿದ್ಯುತ್ ಪೂರೈಸಲು ಸೆಸ್ಕ್ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಮಾದರಿ ಗ್ರಾಮ ನಿರ್ಮಾಣ ಕೈಗೊಂಡಿದ್ದು, 5ನೇ ದೊಡ್ಡ ಗ್ರಾಮದಲ್ಲೂ ಇದರ ಕಾಮಗಾರಿಗೆ ಚಾಲನೆ ನೀಡಿ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುತ್ತಿದೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ತಾಲೂಕಿನ ನೇರಳೆಕೆರೆ ಗ್ರಾಮದಲ್ಲಿ ಮಂಗಳವಾರ ಸೆಸ್ಕ್ ವತಿಯಿಂದ ಹಮ್ಮಿಕೊಂಡಿದ್ದ ಸುಧಾರಿತ ವಿದ್ಯುತ್ ಪೂರೈಕೆಯ ಮಾದರಿ ಗ್ರಾಮ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹಳೆಯ ಕಂಡಕ್ಟರ್ ತಂತಿಗಳೊಂದಿಗೆ ವಿದ್ಯುತ್ ಕಂಬಗಳ ಬದಲಾವಣೆ, ಅಧಿಕ ಒತ್ತಡವಿರುವ ಪರಿವರ್ತಕಗಳೊಂದಿಗೆ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಕೆ ಹಾಗೂ ಗ್ರೌಂಡಿಂಗ್ ನಿರ್ವಹಣೆ ಮಾಡಿ ಜನ ಜಾನುವಾರುಗಳಿಗೆ ಯಾವುದೇ ಸಾವು-ನೋವು ಉಂಟಾಗದಂತೆ ಕ್ರಮವಹಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ ವಿದ್ಯುತ್ ಪೋಲಾಗುವುದನ್ನು ತಡೆಯುವ ಜತೆಗೆ ಜನರಿಗೆ ಅಧಿಕವಾಗುತ್ತಿದ್ದ ವಿದ್ಯುತ್ ದರಕ್ಕೂ ಇದು ಕಡಿವಾಣ ಹಾಕಲು ನೆರವಾಗಲಿದೆ. ಇದಕ್ಕಾಗಿ ನಮ್ಮ ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ಕನ್ನಂಬಾಡಿ ಜಲಾಶಯದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ಕಾವೇರಿ ದೀಪಾರತಿ ಮೂಲಕ ಪ್ರವಾಸೋದ್ಯಮ ವೃದ್ಧಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರಸ್ತುತ ಇದಕ್ಕೆ ರೈತಾಪಿ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರಿಂದ ಕೇಳಿಬಂದಿರುವ ವಿರೋಧವನ್ನು ಸಹ ನಾವು ಗೌರವಿಸಿ ಮುಂದಿನ ದಿನಗಳಲ್ಲಿ ಖುದ್ದು ಡಿಸಿಎಂ ಹಾಗೂ ಸಚಿವ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಹೋರಾಟಗಾರರೊಂದಿಗೆ ಚರ್ಚೆ ನಡೆಸಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಗೊಂದಲ ನಿವಾರಿಸಲಿದ್ದೇವೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪಟೇಲ್ ಸುರೇಶ್, ಅರಕೆರೆ ಸಂತೋಷ್, ಗಾಮನಹಳ್ಳಿ ಗ್ರಾಪಂ ಅಧ್ಯಕ್ಷ ಮಹೇಶ್, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ, ಮುಖಂಡರಾದ ಶಶಾಂಕ್, ಗಾಮನಹಳ್ಳಿ ಮಹೇಶ್, ತಾಪಂ ಇಒ ವೇಣು, ಸೆಸ್ಕ್ ಎಇಇ ಮಂಜುನಾಥ್ ಪ್ರಸಾದ್, ಶಾಖಾಧಿಕಾರಿ ಬಾಬು ಪ್ರಸಾದ್, ಸಿಬ್ಬಂದಿ ಉಮೇಶ್, ಅನೀಲ್, ನೊದೆಕೊಪ್ಪಲು ಸಿದ್ದೇಶ್ವರ ಕೃಷ್ಣೇಗೌಡ ಇತರರು ಇದ್ದರು.
ಸೆಸ್ಕ್ ಮಾದರಿ ಗ್ರಾಮ ನಿರ್ಮಾಣ ಕಾಮಗಾರಿಗೆ ಚಾಲನೆ

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar
Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…
ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits
Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…