ಬೆಳಗಾವಿ: ರಾಜ್ಯದ ಗಡಿಭಾಗ ಬೆಳಗಾವಿ ನಗರದಲ್ಲಿ ಮಂಗಳವಾರ ಬೆಳ್ಳಂಬೆಳ್ಳಗೆ ಚಳಿಯಲ್ಲಿ ರೈತರು, ಅಧಿಕಾರಿಗಳು ಸಿರಿಧಾನ್ಯ ಬೆಳೆಗಳ ಜಾಗೃತಿ ನಡಿಗೆ ನಡೆಸಿ ಎಲ್ಲರ ಗಮನ ಸೆಳೆದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ರೈತರು, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಸಿರಿಧಾನ್ಯ ಬೆಳೆ ಬೆಳೆಯಲು ಪ್ರೋತ್ಸಾಹ, ಸಿರಿಧಾನ್ಯ ಬಳಕೆ ಕುರಿತು ಕರಪತ್ರ, ಫಲಕಗಳನ್ನು ಹಿಡಿದ ನಗರದ ತುಂಬೆಲ್ಲಾ ನಡಿಗೆ ನಡೆಸಿ ಜಾಗೃತಿ ಮೂಡಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ರೈತರ ನಡಿಗೆ ಜಾಥಾಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿನಿರ್ದೇಶಕ ಶಿವನಗೌಡ ಪಾಟೀಲ ಉಪಸ್ಥಿತರಿದ್ದರು.