ಗಾಂಧಿ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ


ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಹಾತ್ಮ ಗಾಂಧೀಜಿ ಅವರ ಜೀವನ ಮತ್ತು ಸಾಧನೆ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಏರ್ಪಡಿಸಿರುವ ಛಾಯಾಚಿತ್ರ ಪ್ರದರ್ಶನಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಗುರುವಾರ ಚಾಲನೆ ನೀಡಿದರು.
ಸರ್ವೋದಯ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಪುಟ್ಟರಾಜು ಇತರರು ಇದ್ದರು.
ಮಹಾತ್ಮ ಗಾಂಧೀಜಿ ಅವರ 150 ನೇ ವರ್ಷಾಚರಣೆ ಪ್ರಯುಕ್ತ ನಗರದ ಡಿ.ದೇವರಾಜ ಅರಸು ಭವನದಲ್ಲಿ ಅ.12ರವರೆಗೆ ಏರ್ಪಡಿಸಿರುವ ಛಾಯಾಚಿತ್ರ ಪ್ರದರ್ಶನದಲ್ಲಿ ಗಾಂಧೀಜಿ ಅವರ ತಂದೆ, ತಾಯಿಯ ಫೋಟೋ ಜತೆ ಪರಿಚಯ, ಬಾಲ್ಯ ಹಾಗೂ ಶಿಕ್ಷಣ, ವಕೀಲ ವೃತ್ತಿ, ಸಬರಮತಿ ಆಶ್ರಮ, ಜಲಿಯನ್ ವಾಲಬಾಗ್ ಘಟನೆ, ಬೆಳಗಾವಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕಾರ, ಉಪ್ಪಿನ ಸತ್ಯಾಗ್ರಹ, ಗಾಂಧೀಜಿ ಮತ್ತು ಜಿನ್ನಾ ಮಾತುಕತೆ, ಭಾರತ ಬಿಟ್ಟು ತೊಲಗಿ, ಹಾಗೆಯೇ ಗಾಂಧೀಜಿ ಅವರು ನಡೆಸಿದ ಪ್ರಾರ್ಥನಾ ಸಭೆ, ಶಾಂತಿ ಮಂತ್ರ, ಸರಳತೆಯ ದೂರ ದೃಷ್ಟಿ ಹಾಗೂ ವಿಚಾರ ಧಾರೆಗಳನ್ನು ಛಾಯಾಚಿತ್ರ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ.
ಬಾಲ್ಯ ಶಿಕ್ಷಣ ಹೋರಾಟ ಸತ್ಯಾಗ್ರಹಗಳು ಪ್ರಮುಖರೊಡಗಿನ ಮಾತುಕತೆ ನಡೆಸುವ ಮಹಾತ್ಮ ಗಾಂಧೀಜಿಯವರ ಛಾಯಾಚಿತ್ರಗಳು ಗಮನ ಸೆಳೆಯುತ್ತವೆ.

======
10ಆದರ್ಶ್‌ಕೆಡಿಜಿಎ9: ಮಹಾತ್ಮ ಗಾಂಧೀಜಿ ಅವರ ಜೀವನ ಮತ್ತು ಸಾಧನೆ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಏರ್ಪಡಿಸಿರುವ ‘ಛಾಯಾಚಿತ್ರ ಪ್ರದರ್ಶನ’ಕ್ಕೆ ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಗಾಂಧೀಜಿ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ಚಾಲನೆ ನೀಡಿದರು. ಟಿ.ಪಿ.ರಮೇಶ್, ಚಿನ್ನಸ್ವಾಮಿ ಇತರರು ಇದ್ದರು.
====
10ಆದರ್ಶ್‌ಕೆಡಿಜಿಎ10: ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಸಾಧನೆ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಏರ್ಪಡಿಸಿರುವ ’ಛಾಯಾಚಿತ್ರ ಪ್ರದರ್ಶನ’ವನ್ನು ವಿದ್ಯಾರ್ಥಿಗಳು ವೀಕ್ಷಿಸಿಸಿದರು.
=====

Leave a Reply

Your email address will not be published. Required fields are marked *