ಹೊಳೆಹೊನ್ನೂರು: ಮೈದೊಳಲಿನ ಸರ್ಕಾರಿ ಶಾಲೆ ಆರಂಭವಾಗಿ ಶತಮಾನ ಕಳೆದಿದ್ದರೂ ಈ ಶಾಲೆ ಇರುವ ಜಾಗ ಮಾತ್ರ ಶಾಲೆ ಹೆಸರಿಗಿಲ್ಲ. ನಾಲ್ಕೈದು ದಶಕಗಳಿಂದ ಮೈದೊಳಲು ಗ್ರಾಮಸ್ಥರು ಶಾಲೆ ಇರುವ ಜಾಗವನ್ನು ಶಾಲೆ ಹೆಸರಿಗೆ ಖಾತೆ ಮಾಡಿಸಲು ನಡೆಸುತ್ತಿರುವ ಹೋರಾಟಗಳು ಲ ನೀಡಿಲ್ಲ.
ಈ ವರ್ಷ ಮೈದೊಳಲಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 100 ವರ್ಷ ಪೂರೈಸಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಆದರೆ ಶಾಲೆಯ ಜಾಗವೇ ಶಾಲೆ ಹೆಸರಿಗಿಲ್ಲದಿರುವುದು ಬೇಸರದ ಸಂಗತಿ. ಗ್ರಾಮದ ಹೃದಯ ಭಾಗದಲ್ಲಿರುವ ಸರ್ವೇ ನಂ.36ರಲ್ಲಿನ 3.24 ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಮೈದೊಳಲು ಶಾಲೆ ಹಾಗೂ ವಿಶಾಲ ಆಟದ ಮೈದಾನವಿರುವ ಜಾಗ ಪಹಣಿಯಲ್ಲಿ ಕೆರೆ ಎಂದು ನಮೂದಾಗಿದೆ. ಇದರಿಂದ ಶಾಲಾಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ.
ನೀರಾವರಿ ಇಲಾಖೆಯ ಸಣ್ಣ ಹಾಗೂ ಅತಿ ಸಣ್ಣ ಕೆರೆಗಳ ಪಟ್ಟಿಯಲ್ಲೂ ಶಾಲೆಯ ಜಾಗದ ದಾಖಲೆಗಳಿಲ್ಲ. ಅಲ್ಲದೆ ಸರ್ಕಾರ ಮಾಡಿರುವ ನಿರ್ಜೀವ ಹಾಗೂ ಸಜೀವ ಕೆರೆಗಳ ಪಟ್ಟಿಯಲ್ಲೂ ಶಾಲೆಯ ಜಾಗದ ಪ್ರಸ್ತಾವನೆಯಾಗಿಲ್ಲ. ಸರ್ಕಾರದ ಯಾವುದೇ ಇಲಾಖೆಯಲ್ಲೂ ಶಾಲೆಯ ಜಾಗಕ್ಕೆ ಮೂಲ ದಾಖಲೆಗಳಿಲ್ಲ. ಆದರೂ ಶಾಲೆಯ ಜಮೀನು ಮಾತ್ರ ಕೆರೆ ಎಂದು ನಮೂದಾಗಿರುವುದು ಶಿಕ್ಷಣ ಇಲಾಖೆಗೂ ದೊಡ್ಡ ತಲೆನೋವಾಗಿದೆ.
2010ರಲ್ಲಿ ಮೈದೊಳಲಿನ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿದ ಸರ್ಕಾರವು 8ನೇ ತರಗತಿಯನ್ನು ಆರಂಭಿಸಿದೆ. ಅಲ್ಲದೆ ಪ್ರಧಾನ ಮಂತ್ರಿಗಳ ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿದೆ. ಪಿಎಂಶ್ರೀ ಅನುದಾನದೊಟ್ಟಿಗೆ ರಾಜ್ಯ ಸರ್ಕಾರದ ಅನುದಾನಗಳನ್ನು ಬಳಸಿಕೊಳ್ಳಲು ಜಾಗದ ಸಮಸ್ಯೆ ತೊಡಕಾಗಿದೆ. 3 ಎಕರೆ ಮೈದಾನವು ನಿರ್ವಹಣೆ ಇಲ್ಲದೆ ಸೊರಗುತ್ತಿದೆ.
ಜಾಗದ ಸಮಸ್ಯೆ ಸರಿಪಡಿಸಲು ಎಚ್.ಆರ್. ಬಸವರಾಜಪ್ಪ, ಕಡಿದಾಳು ಶಾಮಣ್ಣ ಮತ್ತಿತರರು ಅಂದಿನ ಕಂದಾಯ ಮಂತ್ರಿ ಕಾಗೋಡು ತಿಮ್ಮಪ್ಪ ಅವರ ಬಳಿ ಚರ್ಚಿಸಿದರೂ ನಿರೀಕ್ಷಿತ ಲ ನೀಡಲಿಲ್ಲ. ಗ್ರಾಪಂನಿಂದ ಕೆಲ ಸಣ್ಣಪಟ್ಟ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ. ಆದರೆ ಕ್ರೀಡಾಂಗಣದ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ.
ಅಧಿಕಾರಿಗಳ ಪ್ರಮಾದ: ಗ್ರಾಮದ ಏಳು ಹಳ್ಳದ ನಾಲೆಗೆ ಹೊಂದಿಕೊಂಡಿರುವ ದನಕರುಗಳಿಗೆ ನೀರು ಕುಡಿಸುವ ಕಟ್ಟೆ ಎಂದು ಕರೆಯುತ್ತಿದ ಜಾಗವನ್ನು ಗ್ರಾಮ ಲೆಕ್ಕಾಧಿಕಾರಿಗಳು ಮಾಡಿರುವ ಪ್ರಮಾದದಿಂದ ಕೆರೆ ಎಂದು ನಮೂದಾಗಿದೆ. ರಾಜ್ಯದ ನೀರಾವರಿ ವಿಭಾಗದ ನೈಸರ್ಗಿಕ ಕೆರೆ, ಜೀವಂತ ಕೆರೆ ಸೇರಿ ನಿರ್ಜೀವ ಕೆರೆಗಳ ಪಟ್ಟಿಯಲ್ಲೂ ಮೈದೊಳಲು ಶಾಲೆಯ ಜಾಗವು ಕೆರೆ ಎಂಬುದಕ್ಕೆ ಪುರಾವೆಗಳಲಿಲ್ಲ ಎಂದು ಅಧಿಕಾರಿಗಳು ದಾಖಲೆಗಳನ್ನು ನೀಡಿದ್ದಾರೆ. 1998ರಲ್ಲಿಯೇ ಸರ್ಕಾರಿ ಶಾಲೆಯ ಜಾಗ ಡಿನೋಟಿಫಿಕೇಷನ್ ಆಗಿದ್ದರೂ ಪಹಣಿಗಳಲ್ಲಿ ಮಾತ್ರ ಕೆರೆ ಎಂದು ನಮೂದಾಗಿದೆ. ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಅವರು ಗ್ರಾಮಸ್ಥರ ನಿಯೋಗವನ್ನು ಕರೆದುಕೊಂಡು ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಅತಸ್ತಿತ್ವಕ್ಕೆ ಬರದ ಸಮಸ್ಯೆ: 2018ರ ಕೊನೆಯ ಕ್ಯಾಬಿನೆಟ್‌ನಲ್ಲಿ ಶಾಲೆ ಜಾಗದ ಸಮಸ್ಯೆ ಇತ್ಯರ್ಥಕ್ಕೆ ಸಿದ್ಧವಾಗಿತ್ತು. ಸರ್ಕಾರದ ಕೊನೆಯ ಅಧಿವೇಶನವಾದ್ದರಿಂದ ಅಧಿಕಾರಿಗಳು ರಾಜ್ಯದ ವಿವಿಧ ಇಲಾಖೆಗಳ ಸುಮಾರು 1500ಕ್ಕೂ ಹೆಚ್ಚು ಕೆರೆ ಸಮಸ್ಯೆಗಳ ಕಡತಗಳನ್ನು ಸದನದ ಮುಂದೆ ಪ್ರದರ್ಶಿಸಿದರು. ಕೆರೆಗಳ ವಿಚಾರವನ್ನು ಕೆದಕಿದರೆ ಮುಂಬರುವ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆ ಕಡತ ಮತ್ತೊಮ್ಮೆ ಮೂಲೆ ಸೇರಿತ್ತು. ಅಂದಿನ ಸ್ವೀಕರ್ ಕೆ.ಬಿ.ಕೋಳಿವಾಡ ಆದೇಶದಂತೆ ನಿರ್ಜೀವ ಕೆರೆಗಳ ಪಟ್ಟಿ ಸಿದ್ಧಪಡಿಸಲು ರಚನೆಯಾದ ಸಮಿತಿಯೂ ಅಸ್ತಿತ್ವಕ್ಕೆ ಬರಲಿಲ್ಲ.
ಗ್ರಾಮಸ್ಥರ ನಿಯೋಗವನ್ನು ಕರೆದುಕೊಂಡು ನಾಲ್ಕೈದು ಬಾರಿ ಸಂಬಂಧಿಸಿದ ಇಲಾಖೆ ಸಂಪರ್ಕಿಸಿದರೂ ಪ್ರಯೋಜವಾಗಿಲ್ಲ. ಶಿಕ್ಷಣ ಸಚಿವರು ನಮ್ಮ ಜಿಲ್ಲೆಯವರೇ ಆಗಿರುವುದರಿಂದ ಈ ಬಾರಿ ಜಾಗದ ಸಮಸ್ಯೆ ಇತ್ಯರ್ಥವಾಗುವ ನಿರೀಕ್ಷೆ ಇದೆ. ಶಾಲೆ ಜಾಗವನ್ನು ಶಾಲೆಗೆ ಸೇರಿಸುವ 5-6 ದಶಕಗಳ ಕನಸು ಈಡೇರಿದರೆ ಶಾಲಾ ಶತಮಾನೋತ್ಸವ ಕಳೆಗಟ್ಟುತ್ತದೆ ಎನ್ನುತ್ತಾರೆ ಶಾಸಕಿ ಶಾರದಾ ಪೂರ‌್ಯಾನಾಯ್ಕಾ.
ಶತಮಾನದ ಶಾಲೆಗೆ ಸ್ವಂತ ಜಾಗವಿಲ್ಲ!
You Might Also Like
ನಿಮ್ಮ ಸ್ಮಾರ್ಟ್ಫೋನ್ ನಿಮ್ಮ ಫಿಟ್ನೆಸ್ ಕೋಚ್… ಆಶ್ಚರ್ಯವಾಯಿತೇ? ಇಲ್ಲಿದೆ ಅಚ್ಚರಿ ಮಾಹಿತಿ… Smartphone
Smartphone : ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ, 2040ರ…
ಈ ದಿನಾಂಕಗಳಂದು ಜನಿಸಿದವರು ತಮ್ಮ ಬುದ್ಧಿವಂತಿಕೆಯಿಂದಾಗಿ ರಾಯಲ್ ಲೈಫ್ ನಡೆಸುತ್ತಾರೆ! Numerology
Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ…
ನೀವು ಬೆಳಿಗ್ಗೆ ತಿಂಡಿಯನ್ನು ತಡವಾಗಿ ತಿನ್ನುತ್ತೀರಾ? ಎಚ್ಚರ..ಈ ಕಾಯಿಲೆ ಬರೋದು ಪಕ್ಕಾ… breakfast
breakfast: ಬೆಳಗಿನ ಉಪಾಹಾರವು ದೇಹಕ್ಕೆ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಉಪಹಾರವನ್ನು ಬಿಡಬಾರದು. ತಡವಾಗಿ ತಿನ್ನುವುದು…