blank

ಈರುಳ್ಳಿ ರಫ್ತು ಮೇಲಿನ ಶೇ.20 ಸುಂಕ ವಾಪಸ್‌! ಬೇಸಿಗೆಯಲ್ಲಿ ಕಡಿಮೆಯಾಗುತ್ತಾ ಈರುಳ್ಳಿ ಬೆಲೆ? onion 

onion price hike

ನವದೆಹಲಿ: ( onion ) ಈರುಳ್ಳಿ ಮೇಲಿನ ರಫ್ತು ಸುಂಕದಲ್ಲಿ ಶೇ 20ರಷ್ಟನ್ನು ಹಿಂಪಡೆಯಲಿದೆ. ಇದು ಏಪ್ರಿಲ್‌ 1ರಿಂದ ಜಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಈ ಬೇಸಿಗೆಗೆ ಈರುಳ್ಳಿ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ ಎನ್ನಲಾಗಿದೆ.

ಸರ್ಕಾರ ಈರುಳ್ಳಿ ರಫ್ತು ಮಾಡುವುದನ್ನು ಸುಲಭಗೊಳಿಸಿದೆ. ಪ್ರಸ್ತುತ, ಭಾರತದಲ್ಲಿ ಈರುಳ್ಳಿ ರಫ್ತಿನ ಮೇಲೆ ಸುಂಕವಿದೆ.  ಶೇ. 20.ರಷ್ಟು ಸುಂಕವನ್ನು ಈಗ ಸರ್ಕಾರ ಏಪ್ರಿಲ್ 1 ರಿಂದ  ಸುಂಕವನ್ನು ಹಿಂಪಡೆಯಲು ನಿರ್ಧರಿಸಿದೆ.

ಸರ್ಕಾರವು ಸೆಪ್ಟೆಂಬರ್ 2024ರಲ್ಲಿ ಈರುಳ್ಳಿ ರಫ್ತಿನ ಮೇಲೆ ಈ ಸುಂಕವನ್ನು ವಿಧಿಸಿತು. ಈಗ ಶೇ. 20 ರಷ್ಟು ರಫ್ತು ಸುಂಕವನ್ನು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಧಿಕೃತ ಹೇಳಿಕೆಯನ್ನು ನೀಡಿ, ರೈತರ ಹಿತಾಸಕ್ತಿಗಳನ್ನು ಕಾಪಾಡಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಪತ್ರ ಬಂದ ನಂತರವೇ ಶೇ.20 ರಷ್ಟು ರಫ್ತು ಸುಂಕವನ್ನು ಹಿಂಪಡೆಯಲು ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಈರುಳ್ಳಿ ರೈತರಿಗೆ ಅವರ ಉತ್ಪನ್ನಗಳ ಮೇಲೆ ಪ್ರಯೋಜನಗಳನ್ನು ಒದಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ . ಸಾಮಾನ್ಯ ಗ್ರಾಹಕರಿಗೆ ಈರುಳ್ಳಿ ಬೆಲೆಯನ್ನು ಕಡಿಮೆ ಇಡುವ ಸರ್ಕಾರದ ಬದ್ಧತೆಯನ್ನು ಇದು ತೋರಿಸುತ್ತದೆ. ಈ ಸುಗ್ಗಿಯ ಸಮಯದಲ್ಲಿ ಈರುಳ್ಳಿ ಚೆನ್ನಾಗಿ ಬರುವ ನಿರೀಕ್ಷೆಯಿದೆ. ಆದ್ದರಿಂದ, ಈರುಳ್ಳಿಯ ಸಗಟು ಮತ್ತು ಚಿಲ್ಲರೆ ಬೆಲೆಗಳು ಕಡಿಮೆಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

 

Onion

ಸೆಪ್ಟೆಂಬರ್ 2024 ರಿಂದ ರಫ್ತು ಸುಂಕ ಜಾರಿಗೆ ಬಂದಿದ್ದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರ್ಚ್ 18 ರವರೆಗೆ ದೇಶದಲ್ಲಿ ಈರುಳ್ಳಿ ರಫ್ತು 11.65 ಲಕ್ಷ ಟನ್‌ಗಳನ್ನು ತಲುಪಿದೆ. ಸೆಪ್ಟೆಂಬರ್ 2024 ರಲ್ಲಿ ಮಾಸಿಕ ಈರುಳ್ಳಿ ರಫ್ತು 0.72 ಲಕ್ಷ ಟನ್‌ಗಳಷ್ಟಿತ್ತು. ಈ ವರ್ಷದ ಜನವರಿಯಲ್ಲಿ ಇದು 1.85 ಲಕ್ಷ ಟನ್‌ಗಳಿಗೆ ಏರಿತು. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ಪ್ರಮುಖ ಈರುಳ್ಳಿ ಉತ್ಪಾದಕ ರಾಜ್ಯಗಳಲ್ಲಿ  ಬೆಳೆಯ ಪೂರೈಕೆಯಲ್ಲಿ ಹೆಚ್ಚಳದಿಂದಾಗಿ ಈರುಳ್ಳಿ ಬೆಲೆ ಕುಸಿದಿದೆ.

 

ಈರುಳ್ಳಿ ರಫ್ತು ಮೇಲಿನ ಶೇ.20 ಸುಂಕ ವಾಪಸ್‌! ಬೇಸಿಗೆಯಲ್ಲಿ ಕಡಿಮೆಯಾಗುತ್ತಾ ಈರುಳ್ಳಿ ಬೆಲೆ? onion 

ಮುಂಬರುವ ತಿಂಗಳುಗಳಲ್ಲಿ ದೇಶದಲ್ಲಿ ಈರುಳ್ಳಿ ಬೆಲೆಗಳು ನಿಯಂತ್ರಣದಲ್ಲಿ ಉಳಿಯುವ ನಿರೀಕ್ಷೆಯಿದೆ. ಈ ವರ್ಷದ  ಬೆಳೆಯಲ್ಲಿ ಈರುಳ್ಳಿ ಉತ್ಪಾದನೆ 227 ಲಕ್ಷ ಟನ್ ಆಗಲಿದೆ ಎಂದು ಕೃಷಿ ಸಚಿವಾಲಯ ಅಂದಾಜಿಸಿದೆ. ಇದು ಕಳೆದ ವರ್ಷದ 19.2 ಮಿಲಿಯನ್ ಟನ್‌ಗಳಿಗಿಂತ ಶೇ 18 ರಷ್ಟು ಹೆಚ್ಚಾಗಿದೆ. ಭಾರತದ ಒಟ್ಟು ಉತ್ಪಾದನೆಯ ಶೇ. 70-75 ರಷ್ಟಿರುವ ಈರುಳ್ಳಿ, ಅಕ್ಟೋಬರ್-ನವೆಂಬರ್‌ನಲ್ಲಿ ಬೆಳೆ ಸರಬರಾಜು ಪ್ರಾರಂಭವಾಗುವವರೆಗೆ ಮಾರುಕಟ್ಟೆಯಲ್ಲಿ ಬೆಲೆಗಳನ್ನು ಸ್ಥಿರವಾಗಿಡಲು ಅತ್ಯಗತ್ಯವಾಗಿದೆ.

 

TAGGED:
Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…