Friday, 16th November 2018  

Vijayavani

Breaking News

ಕೇರಳ ಪ್ರವಾಹ: ರೆಡ್ ಅಲರ್ಟ್ ಹಿಂದಕ್ಕೆ, ಕೊಚ್ಚಿ ವಿಮಾನ ಹಾರಾಟಕ್ಕೆ ಕ್ರಮ

Sunday, 19.08.2018, 3:34 PM       No Comments

ತಿರುವನಂತಪುರ: ಭಾರಿ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿ ನಲುಗಿ ಹೋಗಿದ್ದ ಕೇರಳದಲ್ಲಿಂದು ಮಳೆ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯದ 12 ಜಿಲ್ಲೆಗಳಲ್ಲಿ ಘೋಷಿಸಲಾಗಿದ್ದ ರೆಡ್ ಅಲರ್ಟ್‌ನ್ನು ಹಿಂದಕ್ಕೆ ಪಡೆಯಲಾಗಿದೆ.

ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇದುವರೆಗೂ 357 ಮಂದಿ ಮೃತಪಟ್ಟು, ಆರು ಲಕ್ಷಕ್ಕೂ ಅಧಿಕ ಮಂದಿಯನ್ನು 3000 ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ಈ ಮಧ್ಯೆ ಪ್ರವಾಹದಿಂದಾಗಿ ರದ್ದುಗೊಳಿಸಿದ್ದ ವಿಮಾನ ಹಾರಾಟವನ್ನು ಕೊಚ್ಚಿಯಿಂದ ವಿಮಾನ ಹಾರಾಟಕ್ಕೆ ಅಗತ್ಯ ಕಾರ್ಯಾಚರಣೆ ಕೈಗೊಳ್ಳಲು ಕೇಂದ್ರವು ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಕೇಂದ್ರ ಸಚಿವ ಸುರೇಶ್‌ ಪ್ರಭು ತಿಳಿಸಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಟ್ವೀಟ್‌ ಮಾಡಿ, ಕಟ್ಟ ಕಡೆಯ ವ್ಯಕ್ತಿಯನ್ನು ಸಹ ಉಳಿಸಿಕೊಳ್ಳಲು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈಗಾಗಲೇ ರಕ್ಷಿಸಲ್ಪಟ್ಟಿರುವ ಜನರು ಹೆಲ್ಪ್‌ಲೈನ್‌ಗಳಿಗೆ ಕರೆ ಮಾಡುತ್ತಿದ್ದು, ತಪ್ಪು ಸಂದೇಶಗಳನ್ನು ಕಳುಹಿಸಿ ರಕ್ಷಣಾ ಕಾರ್ಯಾಚರಣೆಯನ್ನು ವಿಳಂಬಗೊಳಿಸಲಾಗುತ್ತಿದೆ. ಹಾಗಾಗಿ ಮಾನ್ಯವಾದಂತಹ ಸಂದೇಶಗಳನ್ನು ಮಾತ್ರ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.

ಮೊನ್ನೆಯಷ್ಟೆ ಪ್ರವಾಹ ಪೀಡಿತ ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದಿಂದ 500 ಕೋಟಿ ರೂ. ಪರಿಹಾರ ಮತ್ತು ಹೆಚ್ಚಿನ ಹೆಲಿಕಾಪ್ಟರ್‌, ದೋಣಿ ಮತ್ತು ಇತರೆ ಅಗತ್ಯ ಉಪಕರಣಗಳನ್ನು ಒದಗಿಸುವ ಭರವಸೆ ನೀಡಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top