ದೇಶದ ಜಾತ್ಯತೀತ ತತ್ತ್ವಗಳಿಗೆ ಕೇಂದ್ರ ಸರ್ಕಾರದಿಂದ ಧಕ್ಕೆ: ಡಿಎಂಕೆ ವರಿಷ್ಠ ಸ್ಟಾಲಿನ್​

ಚೆನ್ನೈ: ಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನದ ಚುಕ್ಕಾಣಿಯನ್ನು ಹಿಡಿಯುತ್ತಲೇ ಎಂ.ಕೆ.ಸ್ಟಾಲಿನ್, ಮಂಗಳವಾರ​ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಪ್ರಸ್ತುತ ರಾಜಕೀಯ ಸ್ಥಿತಿಗತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ದೇಶದ ಜಾತ್ಯತೀತ ಹಂದರಕ್ಕೆ ಸರ್ವಾಧಿಕಾರಿ ಹಾಗೂ ಕೋಮುವಾದಿ ಬಲಗಳಿಂದ ಧಕ್ಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಎಂ. ಕರುಣಾನಿಧಿ ನಿಧನದ ಬಳಿಕ ಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರ ಪುತ್ರ ಎಂ.ಕೆ.ಸ್ಟಾಲಿನ್​ ಇಂದು ಅಧಿಕೃತವಾಗಿ ಅವಿರೋಧ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಸ್ವೀಕರಿಸಿದ ನಂತರ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಡಿಎಂಕೆ ಪಕ್ಷದ ಜನರಲ್​ ಕೌನ್ಸಿಲ್​ ಸಭೆಯಲ್ಲಿ ಅವರ ಅಭಿಪ್ರಾಯ ಹಂಚಿಕೊಂಡರು.

ಇಂದಿನ ರಾಜಕೀಯ ಗಂಭೀರ ಸವಾಲುಗಳನ್ನು ಎದುರಿಸುವಂತಾಗಿದೆ. ಶಿಕ್ಷಣ, ಕಲೆ, ಸಾಹಿತ್ಯ, ಧರ್ಮ ಎಲ್ಲ ಕ್ಷೇತ್ರಗಳ ಮೇಲೂ ಆಡಳಿತಾತ್ಮಕ ಮತ್ತು ಕೋಮುವಾದಿ ಶಕ್ತಿಗಳು ದಾಳಿ ಮಾಡುತ್ತಿವೆ. ಕೇದ್ರ ಸರ್ಕಾರ ನ್ಯಾಯಾಂಗವನ್ನೇ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಇವೆಲ್ಲವೂ ಜಾತ್ಯತೀತ ತತ್ತ್ವಕ್ಕೆ ಹೊಡೆತವಾಗಿದೆ ಎಂದರು. (ಏಜೆನ್ಸೀಸ್​)

ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಕರುಣಾನಿಧಿ ಪ್ರೀತಿಯ ಪುತ್ರ ಸ್ಟಾಲಿನ್ ಅವಿರೋಧ ಆಯ್ಕೆ

ಡಿಎಂಕೆ ಸಾರಥ್ಯದ ವಿಚಾರ ಸಹೋದರರ ಕಿತ್ತಾಟ ಶುರು