ಸಿಬಿಐ ವಿಶೇಷ ನಿರ್ದೇಶಕ ರಾಕೇಶ್​ ಆಸ್ಥಾನಾ ಅಧಿಕಾರ ಮೊಟಕುಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್​ ಆಸ್ಥಾನಾ ಅವರ ಅಧಿಕಾರವನ್ನು ಮೊಟಕುಗೊಳಿಸಿ, ತನಿಖಾ ಸಂಸ್ಥೆಯಿಂದ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಗುರುವಾರ ಸಂಜೆ ಆದೇಶ ನೀಡಿದೆ.

ಆಸ್ಥಾನ ಅವರೊಂದಿಗೆ ಸಿಬಿಐ ಮೂವರು ಅಧಿಕಾರಿಗಳಾದ ಅರುಣ್​ ಕುಮಾರ್​ ಶರ್ಮಾ, ಡೆಪ್ಯುಟಿ ಇನ್ಸ್​ಪೆಕ್ಟರ್​ ಜನರಲ್​ ಮನೀಶ್​ ಸಿನ್ಹಾ ಮತ್ತು ಎಸ್ಪಿ ಜಯಂತ್​ ಜೆ.ನಾಯ್ಕನವರ್​ ಅವರ ಅಧಿಕಾರವನ್ನು ಕೂಡ ಮೊಟಕುಗೊಳಿಸಿ, ಸಿಬಿಐನಿಂದ ತೆರಳುವಂತೆ ಕೇಂದ್ರ ಸೂಚನೆ ನೀಡಿದೆ.

ಸಿಬಿಐ ಮಾಜಿ ನಿರ್ದೇಶಕ ಅಲೋಕ್​ ವರ್ಮಾ ಮತ್ತು ರಾಕೇಶ್​ ಆಸ್ಥಾನಾ ನಡುವಿನ ಕಿತ್ತಾಟದಿಂದ ಇವರಿಬ್ಬರನ್ನೂ ದೀರ್ಘ ರಜೆಯಲ್ಲಿ ಕೇಂದ್ರ ಕಳಿಸಿತ್ತು. ಅಲೋಕ್​ ವರ್ಮಾ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ ಕ್ಲೀನ್​ಚಿಟ್​ ಪಡೆದು ಅಧಿಕಾರಕ್ಕೆ ಮರಳಿದ್ದರು. ಆದರೆ ಇತ್ತೀಚೆಗೆ ಪ್ರಧಾನಿ ಮೋದಿ ನೇತೃತ್ವದ ಸಮಿತಿ ಅವರನ್ನು ಸಿಬಿಐನಿಂದ ವರ್ಗಾವಣೆ ಮಾಡಿ ಅಗ್ನಿಶಾಮಕದಳದ ಡಿಜಿಯನ್ನಾಗಿ ನೇಮಿಸಿತ್ತು. ಅದನ್ನು ಒಪ್ಪದ ಅಲೋಕ್​ ವರ್ಮಾ ರಾಜೀನಾಮೆ ಸಲ್ಲಿಸಿದ್ದರು.

ಕೇಶ್​ಆಸ್ಥಾನಾ ಸಿಬಿಐ ದಾಖಲಿಸಿರುವ ಎಫ್​ಐಆರ್​ಗೆ ಸಂಬಂಧಪಟ್ಟಂತೆ ಇತ್ತೀಚೆಗೆ ದೆಹಲಿ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರು. (ಏಜೆನ್ಸೀಸ್​)