ಹಾಸ್ಟೆಲ್‌ ಆವರಣದಲ್ಲೇ ಕರ್ನಾಟಕ ಕೇಂದ್ರೀಯ ವಿವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಕಲಬುರ್ಗಿ: ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿದ್ದ ಕೇಂದ್ರಿಯ ‌ವಿಶ್ವವಿದ್ಯಾಲಯ (ಸಿಯುಕೆ) ಇದೀಗ ಅತ್ಯಾಚಾರ ಪ್ರಕರಣಕ್ಕೆ ಸುದ್ದಿಯಾಗಿದ್ದು, ಎಂಎಸ್‌ಸಿ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.

ಆಳಂದ ತಾಲೂಕು ಕಡಗಂಚಿಯಲ್ಲಿರುವ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಡಿ. ​30ರ ತಡರಾತ್ರಿ ವಿವಿ ಸಿಬ್ಬಂದಿಯಿಂದಲೇ ಯುವತಿ ಮೇಲೆ ಅತ್ಯಾಚಾರ ನಡೆದಿದೆ.

ಏನಿದು ಘಟನೆ?

ಶಿವಮೊಗ್ಗ ಮೂಲದ ವಿದ್ಯಾರ್ಥಿನಿಯು ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿದ್ದಳು. ಸಂಜೆ 6.30ರ ವೇಳೆಗೆ ಊಟ ತಯಾರಾಗಿರುವ ಬಗ್ಗೆ ಕೇಳಿಕೊಂಡು ಬರಲು ಮೆಸ್‌ಗೆ ಹೋಗಿದ್ದಾಗ ಅನಿಲ್ ಎಂಬಾತ ಇನ್ನೂ ವಿಳಂಬವಾಗುತ್ತದೆ ಎಂದಿದ್ದಾನೆ. ಬಳಿಕ ಹತ್ತಿರ ಬಂದು ಅಂಗಾಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಅವನನ್ನು ತಳ್ಳಿ ಅಲ್ಲಿಂದ ವಿದ್ಯಾರ್ಥಿನಿ ಹೊರಬಂದಿದ್ದಾಳೆ.

ವಿದ್ಯಾರ್ಥಿನಿಯನ್ನು ಇನ್ನೊಬ್ಬ ಕೆಲಸಗಾರ ಗುರು ಸಮಾಧಾನ ಪಡಿಸುವ ನೆಪದಲ್ಲಿ ನಿಮ್ಮನ್ನು ಹಾಸ್ಟೆಲ್‌ವರೆಗೆ ಬಿಟ್ಟು ಬರುತ್ತೇನೆ ಎಂದು ಹೇಳಿ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಕಿರುಚಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾನೆ.

ಅತ್ಯಾಚಾರದ ಬಳಿಕ‌ ಬಿಡಿಸಿಕೊಂಡು ಯುವತಿ ಹಾಸ್ಟೆಲ್‌ಗೆ ಓಡಿ ಬಂದಿದ್ದಾಳೆ. ಘಟನೆಯ ಬಗ್ಗೆ ಯುವತಿಯರೆಲ್ಲರು ಸೇರಿ ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. ಆರೋಪಿಗಳಾದ ಅನಿಲ್ ಮತ್ತು ಗುರು ವಿರುದ್ಧ ನರೋಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *