More

  19ರಂದು ಪ್ರಶಿಕ್ಷಣ ವರ್ಗ ಸಮಾರೋಪ

  ಶೃಂಗೇರಿ: ಇಲ್ಲಿನ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ರಾಜೀವ್ ಗಾಂಧಿ ಪರಿಸರದಲ್ಲಿ ಒಂದು ತಿಂಗಳ ಅವಧಿಯ ರಾಷ್ಟ್ರಮಟ್ಟದ ವೇದಾಂತ ಶಾಸದ ಪ್ರಶಿಕ್ಷಣ ವರ್ಗ ನಡೆಯುತ್ತಿದ್ದು, ಜೂ.19ರಂದು ಸಮಾರೋಪ ನಡೆಯಲಿದೆ.
  ಅಖಿಲ ಭಾರತ ಸ್ತರದ ಈ ಪ್ರಶಿಕ್ಷಣ ವರ್ಗಕ್ಕೆ 7 ರಾಜ್ಯಗಳಿಂದ ಒಟ್ಟು 24 ಆಯ್ದ ಪ್ರತಿನಿಧಿಗಳು ಆಗಮಿಸಿದ್ದಾರೆ. ರಾಷ್ಟ್ರದ 10ಕ್ಕೂ ಹಾಗೂ ರಾಜ್ಯದ 15ಕ್ಕೂ ಹೆಚ್ಚು ವಿದ್ವಾಂಸರು ತರಬೇತಿ ನೀಡುತ್ತಿದ್ದಾರೆ.
  ಕೇಂದ್ರೀಯ ವಿಶ್ವವಿದ್ಯಾಲಯದಿಂದ ಆಯೋಜನೆಗೊಂಡ ಪ್ರಶಿಕ್ಷಣ ತರಬೇತಿ ಒಂದೇ ಸಮಯಕ್ಕೆ ಮೂರು ರಾಜ್ಯಗಳಲ್ಲಿ ನಡೆಯುತ್ತಿದೆ. ವ್ಯಾಕರಣ, ನ್ಯಾಯಶಾಸ ಮತ್ತು ವೇದಾಂತ ಶಾಸಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಮದ್ರಾಸ್ ಸಂಸ್ಕೃತ ಮಹಾವಿದ್ಯಾಲಯದ ಶ್ರೀಮಣಿ ದ್ರಾವಿಡ ಶಾಸಿ, ಹೈದರಾಬಾದ್‌ನ ಪ್ರೊ. ಶ್ರೀಪಾದ ಸುಬ್ರಹ್ಮಣ್ಯಂ, ಬನಾರಸ್ ಹಿಂದು ವಿಶ್ವವಿದ್ಯಾಲಯದ ಪ್ರೊ. ರಾಜರಾಮ ಶುಕ್ಲ, ಪ್ರೊ. ಮಹಾಬಲೇಶ್ವರ ಭಟ್ ಕಿಚ್ಚಿಕೇರಿ, ಪ್ರೊ. ಗಣೇಶ ಈಶ್ವರ ಭಟ್, ಶಾರದಾ ಪೀಠದ ಆಸ್ಥಾನ ವಿದ್ವಾಂಸ ಎಂ.ಎ.ನಾಗರಾಜ್ ಭಟ್, ತಿರುಪತಿಯ ಪ್ರೊ. ಗಣಪತಿ ಭಟ್, ಡಾ. ಗಣೇಶ್ ಪಂಡಿತ್ ಇತರರು ಭಾಗವಹಿಸಿದ್ದಾರೆ.
  ಅದ್ವೈತ ಬ್ರಹ್ಮಸಿದ್ಧಿ ಎಂಬ ಗ್ರಂಥದ ಪಾಠ ಮಾಡಲು ವಿದ್ವಾಂಸರಾದ ಚೆನ್ನೈನ ಡಾ. ವಾಸುದೇವನ್, ಕೇರಳದ ಚಿನ್ಮಯ ವಿಶ್ವವಿದ್ಯಾಪೀಠದ ಡಾ. ಕಾರ್ತಿಕ್ ಶರ್ಮ, ಶೃಂಗೇರಿಯ ಡಾ. ವಿಶ್ವನಾಥ್ ಸುಂಕಸಾಳ, ಮದ್ರಾಸ್ ಸಂಸ್ಕೃತ ಮಹಾವಿದ್ಯಾಲಯದ ಡಾ. ಮಹೇಶ್ವರನ್ ನಂಬೂದಿರಿ, ತಿರುಪತಿಯ ಪ್ರೊ.ಸತೀಶ್, ಕೇರಳದ ಡಾ.ಪುಪ್ಕರ್ ದೇವಪೂಜಾರಿ ಆಗಮಿಸಿದ್ದಾರೆ.

  See also  ವಿಮಾ ಕಂಪನಿಗೆ ದಂಡ ವಿಧಿಸಿದ ಆಯೋಗ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts